Ad Widget .

ವಿಜಯಪುರ- ಮಂಗಳೂರು ರೈಲು ಸಂಚಾರ ಖಾಯಂಗೊಳಿಸಲು ನಳಿನ್ ಕುಮಾರ್ ಆಗ್ರಹ

ಸಮಗ್ರ ನ್ಯೂಸ್: ಉತ್ತರ ಕರ್ನಾಟಕಕ್ಕೆ ಮಂಗಳೂರಿನಿಂದ ನೇರ ಸಂಪರ್ಕದ ಏಕೈಕ ಮಂಗಳೂರು -ವಿಜಯಪುರ ರೈಲು ಖಾಯಂಗೊಳಿಸಲು ಸಂದ ನಳಿನ್ ಕುಮಾರ್ ಆಗ್ರಹಿಸಿದ್ದಾರೆ.

Ad Widget . Ad Widget .

ಈ ರೈಲು ಇನ್ನೂ ಕೂಡ ವಿಶೇಷ ರೈಲು ನೆಲೆಯಲ್ಲೇ ಸಂಚರಿಸುತ್ತಿದ್ದು ಇದನ್ನು ಖಾಯಂಗೊಳಿಸಲು ರೈಲ್ವೆ ಮಂಡಳಿ ಮೀನಾಮೇಷ ಎಣಿಸುತ್ತಿದೆ.‌ ಕೊರೊನಾ ಸೋಂಕು ಇಳಿಕೆಯಾದ ಬಳಿಕ 2021ರ ಡಿ.1ರಿಂದ ಮರು ಆರಂಭಗೊಂಡಿದ್ದ ಈ ವಿಶೇಷ ರೈಲು ಅನ್ನು ರೈಲ್ವೆ ಮಂಡಳಿ 3 ತಿಂಗಳ ಕಾಲಮಿತಿ ಇರಿಸಿಕೊಂಡು ವಿಶೇಷ ನೆಲೆಯಲ್ಲಿ ಕಳೆದ 11 ತಿಂಗಳಿನಿಂದ ಓಡಿಸುತ್ತಿದೆ.

Ad Widget . Ad Widget .

ಈ ಹಿನ್ನೆಲೆಯಲ್ಲಿ ಈ ರೈಲು ಸಂಚಾರವನ್ನು ಕಾಯಂಗೊಳಿಸಬೇಕು ಎಂಬುದಾಗಿ ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗದಿಂದ ನಿರಂತರ ಆಗ್ರಹ ವ್ಯಕ್ತವಾಗುತ್ತಿದೆ. ಈ ಕುರಿತಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ನೈಋತ್ಯ ರೈಲ್ವೆ ಮಹಾ ಪ್ರಬಂಧಕರಿಗೆ ಪತ್ರ ಬರೆದು ರೈಲನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಂಕರ್ ತೆಗ್ಗಿ, ಸಮಗ್ರ ನ್ಯೂಸ್, ವಿಜಯಪುರ

Leave a Comment

Your email address will not be published. Required fields are marked *