ಸುಳ್ಯ: ನ.ಪಂ ಮಾಜಿ ಉಪಾಧ್ಯಕ್ಷರ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಯತ್ನ

ಸಮಗ್ರ ನ್ಯೂಸ್ : ಸುಳ್ಯದ ನ.ಪಂ ಮಾಜಿ ಉಪಾಧ್ಯಕ್ಷರ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಅ.24ರಂದು ನಡೆದಿದೆ.

Ad Widget ... ..

ವ್ಯಕ್ತಿ ಯನ್ನು ಸುಳ್ಯ.ನ.ಪಂ ಮಾಜಿ ಉಪಾಧ್ಯಕ್ಷರ ಶಾಂತಿ ಪ್ರಭುರವರ ಪತಿ ಸುಳ್ಯದ ಜಟ್ಟಿಪಳ್ಳ ನಿವಾಸಿ ಕೇಶವ ಪ್ರಭು ಎಂದು ತಿಳಿದು ಬಂದಿದೆ.

Ad Widget

ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಪೂರ್ವಾಹ್ನ 11 ಗಂಟೆಯ ಸುಮಾರಿಗೆ ಅವರ ಮನೆಯೊಳಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ವಿಷಯ ತಿಳಿದ ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ. ಗುಂಡು ಹಾರಿಸಿಕೊಳ್ಳಲು ಕಾರಣವೇನೆಂಬ ಬಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *