Ad Widget .

ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಪುಟ್ಟ ಕಂದಮ್ಮನ ಕೂದಲು ದಾನ ನೀಡಿದ ಪೋಷಕರು

ಸಮಗ್ರ ನ್ಯೂಸ್: ಎರಡು ವರ್ಷ ನಾಲ್ಕು ತಿಂಗಳು ವಯಸ್ಸಿನ ಮಗುವಿನ ಕೂದಲನ್ನು ಪೋಷಕರು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದ ಘಟನೆ ಮಂಗಳೂರು ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ನಗರದ ಮರೋಳಿಯ ಸುಮಲತಾ ಮತ್ತು ಭರತ್ ಕುಲಾಲ್ ಎಂಬುವರ ಪುತ್ರಿ ಆದ್ಯ ಕುಲಾಲ್ ಎಂಬ ಮಗುವಿನ ಕೂದಲನ್ನು ದಾನ ಮಾಡಲಾಗಿದೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ತನ್ನ ಕೂದಲನ್ನು ದಾನ ಮಾಡಿರುವ ಈ ಮಗು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತಾದ ಸುದ್ದಿಯನ್ನು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Ad Widget . Ad Widget .

‘ಆದ್ಯ ಕುಲಾಲ್ ಎಂಬ ಮಗುವಿನ ಧೈರ್ಯ ಮತ್ತು ಆಸಕ್ತಿಯನ್ನು ನೋಡಿ ನಾನು ನಿಜವಾಗಿಯೂ ಭಾವುಕನಾದೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ತಮ್ಮ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದರು. ಈ ಮೂಲಕ ಸಮಾಜಕ್ಕೆ ಮಾದರಿಯಾಗುವ ಜೊತೆಗೆ ಅನೇಕರನ್ನು ಪ್ರೇರೇಪಿಸಿದರು. ಸುಮಲತಾ ಮತ್ತು ಭರತ್ ಕುಲಾಲ್ ಅವರು ತಮ್ಮ ಹೆಮ್ಮೆಯ ಪುತ್ರಿಯನ್ನು ಸರಿಯಾಗಿ ಬೆಳೆಸುತ್ತಿದ್ದೀರಿ. ಮುಂದೆ ಅವಳು ಬೆಳೆದು ದೊಡ್ಡವಳಾದಾಗ ಈ ಬಗ್ಗೆ ತಿಳಿದುಕೊಂಡು ಸಂತೋಷಪಡುತ್ತಾಳೆ’ ಎಂದು ಬರೆದಿದ್ದಾರೆ.

Leave a Comment

Your email address will not be published. Required fields are marked *