Ad Widget .

ಮೂಡಿಗೆರೆ:ಶಾಸಕ ಕುಮಾರಸ್ವಾಮಿ ಮನೆ ಮುಂದೆ ಧರಣಿನಿರತ ರೈತರ ಬಂಧನ

ಸಮಗ್ರ ನ್ಯೂಸ್: ರಸ್ತೆ ದುರಸ್ಥಿಗೆ ಆಗ್ರಹಿಸಿ ಶಾಸಕರ ಮನೆ ಮುಂದೆ ಧರಣಿ ನಡೆಸುತ್ತಿದ್ದ ಐವತ್ತು ಹೆಚ್ಚು ರೈತರನ್ನು ಬಂಧಿಸಿರುವ ಘಟನೆ ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಮೂಡಿಗೆರೆ ತಾಲೂಕಿನ ಅರಳಿಮರ, ಗಂಜಲಗೋಡು, ಹಳುವಳ್ಳಿ, ಮತ್ತಿಕೆರೆ ಸೇರಿದಂತೆ ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ಥಿಗೆ ಆಗ್ರಹಿಸಿ ರೈತ ಸಂಘ ಕೆಲ್ಲೂರು ಗ್ರಾಮದಲ್ಲಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಮನವೊಲಿಸಿದರೂ ರೈತರ ಸಂಘದ ಸದಸ್ಯರು ಮಾತು ಕೇಳದ ಹಿನ್ನೆಲೆ ಪೊಲೀಸರು ಐವತ್ತಕ್ಕೂ ಹೆಚ್ಚು ರೈತರ ಸಂಘದ ಕಾರ್ಯಕರ್ತರನ್ನ ಬಂಧಿಸಿದ್ದಾರೆ.

Ad Widget . Ad Widget .

ಅರಳಿಮರ, ಗಂಜಲಗೋಡು, ಹಳುವಳ್ಳಿ, ಮತ್ತಿಕೆರೆ ಗ್ರಾಮದ ರಸ್ತೆಯನ್ನ ದುರಸ್ಥಿ ಮಾಡುವಂತೆ ಕಳೆದ ಏಳೆಂಟು ವರ್ಷಗಳಿಂದಲೂ ಮನವಿ ಮಾಡುತ್ತಿದ್ದರು. ಆದರೆ, ಶಾಸಕರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ, ರೈತ ಸಂಘದ ಸದಸ್ಯರು ಕೂಡಲೇ ರಸ್ತೆ ದುರಸ್ಥಿಗೆ ಆಗ್ರಹಿಸಿ ಶಾಸಕ ಮನೆ ಮುಂದೆ ಧರಣಿ ಮಾಡುತ್ತಿದ್ದರು. ಕಳೆದ ರಾತ್ರಿಯೂ ಶಾಸಕರ ಮನೆ ಮುಂದೆ ಧರಣಿ ಮಾಡಿದ್ದರು. ಶುಕ್ರವಾರ ಕೂಡ ಶಾಸಕರ ಮನೆ ಮುಂದೆ ಧರಣಿ ನಡೆಸುತ್ತಿದ್ದ ರೈತ ಸಂಘದ ಕಾರ್ಯಕರ್ತರನ್ನ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ. ಬಂಧನ ವೇಳೆ ರೈತರು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

12 ವರ್ಷದಿಂದ ರಸ್ತೆ ದುರಸ್ಥಿ ಮಾಡಿಸಿಲ್ಲ. ನೂರಾರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿಭಟನೆ ನಡೆಸಿದರೆ ಅರೆಸ್ಟ್ ಮಾಡಿಸುತ್ತೀರಾ? ಎಂದು ಶಾಸಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

Leave a Comment

Your email address will not be published. Required fields are marked *