Ad Widget .

ಸುಳ್ಯ: ಜವಳಿ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ವಿಡಿಯೋ ವೈರಲ್| ಕೊನೆಗೂ ದೂರು ದಾಖಲಿಸಿದ ಬೆಳ್ಳಾರೆ ಪೊಲೀಸರು

ಸಮಗ್ರ ನ್ಯೂಸ್: ಇಬ್ಬರು ಜವಳಿ ವ್ಯಾಪಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಕೊನೆಗೂ ಎಫ್‌ಐಆರ್ ದಾಖಲಿಸಿದ್ದಾರೆ. ದುಷ್ಕರ್ಮಿಗಳು ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರು ಕೂಡ ವೀಡಿಯೋ ವೀಕ್ಷಿಸಿದ ಬಳಿಕ ಎಫ್‌ಐಆರ್ ದಾಖಲಿಸಿದ್ದಾರೆ.

Ad Widget . Ad Widget .

ಎಫ್‌ಐಆರ್ ನಲ್ಲಿ ಯಾರೊಬ್ಬರ ಹೆಸರನ್ನೂ ನಮೂದಿಸಿಲ್ಲ. ಆದರೆ ಎಫ್ ಐಆರ್ ನ ಪ್ರತಿಯಲ್ಲಿ ಆರೋಪಿತರ ಹೆಸರು ಮತ್ತು ವಿಳಾಸ ಕಲಂನಲ್ಲಿ “ನೋಡಿದರೆ ಗುರುತಿಸಬಲ್ಲ ಗುಂಪಿನಲ್ಲಿದ್ದ ವ್ಯಕ್ತಿಗಳು” ಎಂದು ಬರೆಯಲಾಗಿದೆ.

Ad Widget . Ad Widget .

ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 144, 341, 504, 323, 324, 427, ಜೊತೆಗೆ 149 ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಅಡ್ಡೂರು ಗ್ರಾಮದ ಹೊಳೆ ಬದಿ ನಿವಾಸಿ ರಮೀಝುದ್ದೀನ್ (29) ನೀಡಿದ ದೂರಿನನ್ವಯ ಎಫ್ ಐಆರ್ ದಾಖಲಾಗಿದೆ.

ದೂರುದಾರ ರಮೀಝುದ್ದಿನ್ ಅವರು ತಮ್ಮ ಸಂಬಂಧಿಕ ಮುಹಮ್ಮದ್ ರಫೀಕ್ ಅವರೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ಅಕ್ಟೋಬರ್ 20ರಂದು ಕಡಬ ತಾಲೂಕು ಎಡಮಂಗಲ ಹಾಗೂ ದೋಲ್ಪಾಡಿ ಗ್ರಾಮ ಪರಿಸರಕ್ಕೆ ಕಾರಿನಲ್ಲಿ ಹೋಗಿದ್ದಾರೆ. ಗ್ರಾಮದ ಮನೆಯೊಂದರದಲ್ಲಿದ್ದ ಮಹಿಳೆಯ ಜೊತೆ ಬೆಡ್ ಶೀಟ್ ಮಾರಾಟದ ವಿಚಾರದಲ್ಲಿ ತಕರಾರು ಉಂಟಾಗಿ ಅಲ್ಲಿಂದ ವಾಪಸ್ಸು ಕಾಣಿಯೂರು ಕಡೆಗೆ ತೆರಳಿದ್ದಾರೆ.

ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿಗೆ ಮಧ್ಯಾಹ್ನ 2 ಗಂಟೆಗೆ ತಲುಪಿದಾಗ ಅಲ್ಲಿ ಗುಂಪು ಸೇರಿದವರು ಪಿಕಪ್ ವಾಹನವೊಂದನ್ನು ರಸ್ತೆಗೆ ಅಡ್ಡವಾಗಿ ಇಟ್ಟು ಜವಳಿ ವ್ಯಾಪಾರಿಗಳು ಚಲಾಯಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಅವರಿಬ್ಬರನ್ನೂ ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದೆ.

ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ, ತರಚಿದ, ಗುದ್ದಿದ, ರಕ್ತ ಹೆಪ್ಪುಗಟ್ಟಿದ ಹಾಗು ರಕ್ತಗಾಯಗಳು ಉಂಟು ಮಾಡಿದ ಗುಂಪು, ಕಾರನ್ನು ಹುಡಿ ಮಾಡಿ ಜಖಂ ಗೊಳಿಸಿ ಸುಮಾರು 1.50.000 ಲಕ್ಷಗಳಷ್ಟು ನಷ್ಟ ಹಾಗೂ ಕಾರಿನಲ್ಲಿದ್ದ ಬೆಡ್ ಶೀಟ್ ಗಳನ್ನೂ ಬಿಸಾಡಿ ರೂ 25,000ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *