Ad Widget .

ಜೇನುಗೂಡಿಗೆ ಕೈಹಾಕಿತೇ ರಾಜ್ಯ ಸರ್ಕಾರ? ಮುಸ್ಲಿಂ- ಕ್ರಿಶ್ಚಿಯನ್ ಮೀಸಲಾತಿ ರದ್ದು!?

ಸಮಗ್ರ ನ್ಯೂಸ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೀಸಲಾತಿ ರದ್ದುಪಡಿಸುವ ಲೆಕ್ಕಾಚಾರದಲ್ಲಿದೆ. ಈ ಮೂಲಕ ರಾಜ್ಯ ಸರ್ಕಾರ ಜೇನುಗೂಡಿಗೆ ಕೈಹಾಕುವ ಮಟ್ಟಿಗೆ ಆಲೋಚನೆ ಮಾಡಿದೆ

Ad Widget . Ad Widget .

ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ. ವಾಸ್ತವ ಹೀಗಿದ್ದೂ ರಾಜ್ಯ ಸರ್ಕಾರ ಎಸ್ಸಿಗೆ 15ರಿಂದ 17, ಎಸ್ಟಿಗೆ ಶೇ.3ರಿಂದ 7ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹೆಚ್ಚಿಸಲು ಮುಂದಾಗಿದೆ.

Ad Widget . Ad Widget .

ಮೀಸಲಾತಿಯನ್ನು ಹೆಚ್ಚಳ ಮಾಡಲು ನಾಳೆ ಅಥವಾ ನಾಡಿದ್ದು, ರಾಜ್ಯಪಾಲರ ಅಂಕಿತಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆ ಇದೆ.
ಇಲ್ಲಿ ಮೂಲಪ್ರಶ್ನೆ ಇರುವುದು ಈ ಎರಡು ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಳ ಮಾಡಬೇಕಾದರೆ ಹಾಲಿ ಇರುವ ಯಾವುದಾದರೂ ಸಮುದಾಯದ ಮೀಸಲಾತಿಯನ್ನು ಕಿತ್ತು ಕೊಡುವುದೇ ದಾರಿಯಾಗಿದೆ.

ಈ ಎರಡೂ ಸಮುದಾಯದ ಮೀಸಲಾತಿಯನ್ನು ರದ್ದುಪಡಿಸಿದರೆ ಹಿಂದೂ ಮತಗಳ ಕ್ರೋಢೀಕರಣವಾಗಲಿದ್ದು, ಪ್ರತಿಪಕ್ಷಗಳು ಏನೇ ಅಬ್ಬರಿಸಿಕೊಂಡರೂ ಹಿಂದೂಗಳ ಮತ ಕೈ ತಪ್ಪಬಹುದು ಎಂಬ ಭೀತಿಯಿಂದ ಸುಮ್ಮನಾಗಬಹುದೆಂಬುದು ರಾಜ್ಯ ಬಿಜೆಪಿ ಸರ್ಕಾರದ ಲೆಕ್ಕಾಚಾರವಾಗಿದೆ.

ಇದರ ಜೊತೆಗೆ ಮುಸ್ಲಿಂ ಮೀಸಲಾತಿ ಕಡಿತ ಮಾಡುವಂತೆ ಕೆಲ ಬಿಜೆಪಿಗರು ಒತ್ತಾಯಿಸಿದ್ದಾರೆ. ಇತ್ತ ಮುಸ್ಲಿಂ ಸಮುದಾಯ ತಮ್ಮ ಮೀಸಲಾತಿಯನ್ನು ಶೇ.7ಕ್ಕೆ ಏರಿಸುವಂತೆ ಒತ್ತಾಯಿಸುತ್ತಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ.15 ರಷ್ಟು ಮುಸ್ಲಿಂರಿದ್ದು, ಹೀಗಾಗಿ ಮೀಸಲಾತಿ ಹೆಚ್ಚಿಸುವಂತೆ ಸಮುದಾಯದವರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ರಾಜ್ಯ ಅಲ್ಪಸಂಖ್ಯಾತರ ಆಯೋಗ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದೆ.

ಸರ್ವೋಚ್ಛ ನ್ಯಾಯಾಲಯ ತೀರ್ಪನ್ನು ಉಲ್ಲಂಘಿಸಿ ಮೀಸಲಾತಿಯನ್ನು ಹೆಚ್ಚಳ ಮಾಡಿದರೆ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಕಳೆದ ಕೆಲವು ದಿನಗಳಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್‍ರಿಗೆ ನೀಡಿರುವ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Leave a Comment

Your email address will not be published. Required fields are marked *