Ad Widget .

ಚಿಕ್ಕಮಗಳೂರು : ಶ್ರೀಗಂಧ ಕದಿಯಲು ಬಂದವನ ಹೊಡೆದು ಕೊಂದರಾ ಅರಣ್ಯ ಅಧಿಕಾರಿಗಳು? ಶಿಬಿರದ ಶೌಚಾಲಯದಲ್ಲಿತ್ತು‌ ಆತನ ಹೆಣ…!

ಸಮಗ್ರ ನ್ಯೂಸ್: ಶ್ರೀಗಂಧದ ಮರವನ್ನ ಕಡಿಯಲು ಬಂದಿದ್ದ ಗಂಧದ ಕಳ್ಳನನ್ನ ಅರಣ್ಯ ಅಧಿಕಾರಿಗಳು ಹೊಡೆದು ಕೊಂದರಾ ಎಂಬ ಅನುಮಾನ ವ್ಯಕ್ತವಾಗಿದೆ. ತಾಲೂಕಿನ ಹೊಸಪೇಟೆ ಸಮೀಪದ ಕೋಟೆ ಎಂಬ ಗ್ರಾಮದ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ಗಂಧದ ಕಳ್ಳನ ಮೃತದೇಹ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

Ad Widget . Ad Widget .

ಊರಿಗೆ ಆಂಬುಲೆನ್ಸ್ ಬಂದಿದ್ದನ್ನ ಕಂಡ ಸ್ಥಳೀಯರು ಆನೆ ಶಿಬಿರದ ಶೌಚಾಲಯದಲ್ಲಿ ಬಂದು ನೋಡಿದಾಗ ವ್ಯಕ್ತಿಯ ಶವ ಪತ್ತೆಯಾಗಿದೆ. ಕೂಡಲೇ ಊರಿನ ಜನ ಸೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆತ ಶ್ರೀಗಂಧ ಕಳ್ಳ ಅನ್ನೋದೆ ಆದರೆ ಕಡಿದಿರುವ ಶ್ರೀಗಂಧ ಎಲ್ಲಿದೆ ತೋರಿಸಿ ಎಂದು ಸ್ಥಳಿಯರು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಕಳ್ಳನಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಅದನ್ನ ಬಿಟ್ಟು ಯಾಕೆ ಕೊಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಕಳೆದ ರಾತ್ರಿ ಗಂಧದ ಕಳ್ಳತನಕ್ಕೆ ಬಂದಿದ್ದ ಐವರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ಇಬ್ಬರನ್ನ ಬಂಧಿಸಿ ಕರೆ ತಂದ ಅಧಿಕಾರಿಗಳು ಹೊಸಪೇಟೆಯ ಫಾರೆಸ್ಟ್ ಕ್ವಾಟ್ರಸ್‍ನಲ್ಲಿ ಬಂಧಿತರನ್ನ ಬಿಟ್ಟಿದ್ದರು. ಇಬ್ಬರನ್ನೂ ಬಂಧಿಸಿ ಕರೆತಂದಿದ್ದ ವಾಚರ್‍ನ ಆನೆ ಹಿಮ್ಮೆಟ್ಟಿಸುವ ಶಿಬಿರಕ್ಕೆ ಕಳುಹಿಸಿದ್ದರು.

Ad Widget . Ad Widget .

ಬೆಳಗ್ಗೆ ಮತ್ತೆ ವಾಚರ್ ಕರೆಸಿಕೊಂಡು ವಸಂತ್ ಎಂಬ ಸಿಬ್ಬಂದಿಯ ಕಾರಿನಲ್ಲಿ ಇಲ್ಲಿಗೆ ತಂದಿದ್ದೇವೆ ಎಂದು ವಾಚರ್ ಚಂದು ಹೇಳಿದ್ದಾರೆ. ಗಂಧದ ಕಳ್ಳರನ್ನ ಬೆನ್ನಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಇಬ್ಬರನ್ನ ವಶಕ್ಕೆ ಪಡೆದಿದ್ದರು. ಅವರನ್ನ ಕ್ವಾಟ್ರಸ್‍ಗೆ ಕರೆತಂದು ಅರಣ್ಯ ಇಲಾಖೆ ಸಿಬ್ಬಂದಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಹೀಗೆ ವಿಚಾರಣೆ ಮಾಡುವ ಸಂದರ್ಭದಲ್ಲಿ ಹೊಸಪೇಟೆಯ ಫಾರೆಸ್ಟ್ ಕ್ವಾಟ್ರಸ್‍ನಲ್ಲಿ ವ್ಯಕ್ತಿಯನ್ನ ಹೊಡೆದು ಸಮೀಪದ ಕೋಟೆ ಗ್ರಾಮದ ಆನೆ ಶಿಬಿರದ ಶೌಚಾಲಯದಲ್ಲಿ ತಂದಿಟ್ಟಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಕ್ವಾಟ್ರಸ್‍ನಲ್ಲಿ ಒಬ್ಬ ಇದ್ದಾನೆ. ಮತ್ತೊಬ್ಬ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಯಾವಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತೋ ಆ ಸ್ಥಳದಲ್ಲಿ ಖಾಕಿ ಪಡೆಯ ಸಂಖ್ಯೆಯನ್ನೂ ಹೆಚ್ಚು ಮಾಡಲಾಯಿತು. ಡಿವೈಎಸ್ಪಿ, ನಾಲ್ಕು ಮಂದಿ ಸರ್ಕಲ್, 5 ಮಂದಿ ಪಿಎಸ್‍ಐ ಗಳು ಸೇರಿದಂತೆ 50ಕ್ಕೂ ಹೆಚ್ಚು ಪೆÇಲೀಸರು ಸ್ಥಳದಲ್ಲಿ ಬೀಡುಬಿಟ್ಟದ್ದರು. ಮೃತಪಟ್ಟಿರೋ ವ್ಯಕ್ತಿ ಶಿವಮೊಗ್ಗ ಮೂಲದ ರವಿ ಎಂಬಾತ. ಈತ ಸೇರಿದಂತೆ 5 ಮಂದಿ ಶ್ರೀಗಂಧ ಕಳವಿಗೆ ಬಂದಿದ್ದರು. ನಮ್ಮವರು ಅವರನ್ನ ವಶಕ್ಕೆ ಪಡೆದಿದ್ದಾರೆ. ಸ್ಥಳೀಯರ ಆರೋಪದ ಕುರಿತು ತನಿಖೆ ನಡೆಸೋದಾಗಿ ಡಿ.ಎಫ್.ಓ. ಕ್ರಾಂತಿ ತಿಳಿಸಿದ್ದಾರೆ.

ಆದರೆ, ಅವನು ಹೇಗೆ ಸತ್ತ. ಅಧಿಕಾರಿಗಳು ಹೇಳುವಂತೆ ಹೃದಯಾಘಾತದಿಂದ ಸತ್ತನೋ ಅಥವ ಸ್ಥಳಿಯರು ಹೇಳುವಂತೆ ಅಧಿಕಾರಿಗಳೇ ಹೊಡೆದು ಕೊಂದರೋ ಗೊತ್ತಿಲ್ಲ. ಪೊಲೀಸರ ನಿಷ್ಪಕ್ಷಪಾತವಾದ ತನಿಕೆಯಿಂದ ಸತ್ಯ ಹೊರಬರಬೇಕಿದೆ.

Leave a Comment

Your email address will not be published. Required fields are marked *