ಬೆಳಗಾವಿಯಲ್ಲಿ ಎಸ್ಎಸ್ಎಲ್ಸಿ ವಿಧ್ಯಾರ್ಥಿಯ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಎಸೆಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿಯೋರ್ವನನ್ನು ಮಾರಕಾಸ್ತ್ರಗಳಿಂದ ಇರಿದು, ಕೊಲೆ ಮಾಡಿರುವ ಘಟನೆ ತಾಲೂಕಿನ ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ವರದಿಯಾಗಿದೆ.
ಶಿವಾಜಿ ನಗರ ನಿವಾಸಿ ಪ್ರಜ್ವಲ್ ಶಿವಾನಂದ ಕರಿಗಾರ (16) ಹತ್ಯೆಗೀಡಾದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

Ad Widget ... ..

ಈ ವಿದ್ಯಾರ್ಥಿ ನಾಪತ್ತೆಯಾದ ಕುರಿತು ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಗುರುವಾರ ಅರೆಬೆತ್ತಲೆ ಸ್ಥಿತಿಯಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಈತ ಧರಿಸಿದ್ದ ಶಾಲಾ ಸಮವಸ್ತ್ರದಿಂದ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.

Ad Widget

ವಿದ್ಯಾರ್ಥಿಯನ್ನು ಕೊಲೆಗೈಯಲು ನಿಖರ ಕಾರಣ ತಿಳಿದು ಬಂದಿಲ್ಲ. ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *