ಸಮಗ್ರ ನ್ಯೂಸ್: ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಬುಧವಾರ ಮತ್ತೆ ಇಳಿಕೆ ಕಂಡಿದ್ದು, ಪ್ರತಿ ಡಾಲರ್ ಗೆ 83.01 ರೂಪಾಯಿಗೆ ಕುಸಿದಿದೆ. ವಿದೇಶಿ ಬಂಡವಾಳದ ಹೊರಹರಿವು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಬಲವಾದ ಡಾಲರ್ ಎದುರು ರೂಪಾಯಿ ಮೌಲ್ಯ ಮೊದಲ ಬಾರಿಗೆ 61 ಪೈಸೆ ಕುಸಿದು 83 ರೂಪಾಯಿ ಗಡಿ ದಾಟಿದೆ.
ಇದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹೂಡಿಕೆದಾರರಲ್ಲಿ ಅಪಾಯ-ವಿರೋಧಿ ಮನೋಭಾವವು ಸ್ಥಳೀಯ ಕರೆನ್ಸಿಯ ಮೌಲ್ಯ ಐತಿಹಾಸಿಕ ದಾಖಲೆಯ ಕುಸಿತಕ್ಕೆ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಂಗಳವಾರ 82.36ರ ಮೌಲ್ಯ ಹೊಂದಿದ್ದ ರೂಪಾಯಿ 82ರ ಸನಿಹಕ್ಕೆ ಬರುವ ಆಶಾವಾದ ಮೂಡಿಸಿತ್ತು. ಆದರೆ, ಮತ್ತೆ ನಿರಾಸೆ ಮೂಡಿಸಿದೆ