Ad Widget .

ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣ| ಆಚರಣೆ, ಫಲಾಫಲ, ಪರಿಣಾಮ ಏನು ಗೊತ್ತಾ?

ಸಮಗ್ರ ನ್ಯೂಸ್: ಈ ವರ್ಷದ ಸೂರ್ಯ ಗ್ರಹಣವು ದೀಪಾವಳಿ ಅಮವಾಸ್ಯೆ ದಿನ(ಅಕ್ಟೋಬರ್ 25) ರಂದು ಸಂಭವಿಸಲಿದೆ. 27 ವರ್ಷಗಳ ನಂತರ, ದೀಪಾವಳಿಯಂದು ಸೂರ್ಯ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ದೀಪಾವಳಿಯನ್ನು ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತೆ, ಈ ಬಾರಿ ಕಾರ್ತಿಕ ಅಮಾವಾಸ್ಯೆಯು ಅಕ್ಟೋಬರ್ 24 ಮತ್ತು 25 ರಂದು ಎರಡು ದಿನಗಳಲ್ಲಿದೆ.

Ad Widget . Ad Widget .

ಕಾರ್ತಿಕ ದೀಪಾವಳಿ ಅಮಾವಾಸ್ಯೆ ತಿಥಿ ಅಕ್ಟೋಬರ್ 24 ರಂದು ಸಂಜೆ 05:27 ಕ್ಕೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 25 ರಂದು ಸಂಜೆ 04:18 ರವರೆಗೆ ಇರಲಿದೆ. ಸೂರ್ಯಗ್ರಹಣದ ಸೂತಕದ ಅವಧಿಯು ಅಕ್ಟೋಬರ್ 24 ರ ಮಧ್ಯರಾತ್ರಿ 12 ಗಂಟೆಯ ಮುಂಚಿತವಾಗಿ ಪ್ರಾರಂಭವಾಗುತ್ತೆ. ಗ್ರಹಣ ದೋಷದ ಬಗ್ಗೆ, ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ.

Ad Widget . Ad Widget .

ಈ ಸೂರ್ಯಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿದೆ ಮತ್ತು ಇದು ಈ ವರ್ಷದ ಎರಡನೇ ಸೂರ್ಯಗ್ರಹಣ. ಇದರ ಸೂತಕದ ಅವಧಿ ಅಕ್ಟೋಬರ್ 24 ರಂದು ಅಂದರೆ ದೀಪಾವಳಿ ರಾತ್ರಿ 02:30ಕ್ಕೆ ಶುರು ಆಗಿ ಮರುದಿನ ಅಕ್ಟೋಬರ್ 25 ರಂದು ಸಂಜೆ 04:22 ರವರೆಗೆ ಇರಲಿದೆ.

27 ವರ್ಷಗಳ ನಂತರ ಇಂತಹ ವಿಶೇಷ ಘಟನೆ ನಡೆಯಲಿದೆ.
ಈ ಸೂರ್ಯಗ್ರಹಣವು ಭಾರತದಲ್ಲಿ ಭಾಗಶಃ ಗೋಚರಿಸುತ್ತದೆ. ಗ್ರಹಣವು ಅಕ್ಟೋಬರ್ 25 ರಂದು ಮಧ್ಯಾಹ್ನ 02:29 ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 06:32 ಕ್ಕೆ ಕೊನೆಗೊಳ್ಳಲಿದೆ. ಈ ಸೂರ್ಯಗ್ರಹಣವು 4 ಗಂಟೆ 3 ನಿಮಿಷಗಳ ಕಾಲ ಇರಲಿದೆ. 27 ವರ್ಷಗಳ ಹಿಂದೆ 1995ರಲ್ಲಿ ದೀಪಾವಳಿ ಸಂದರ್ಭದಲ್ಲಿ ಸೂರ್ಯಗ್ರಹಣ ಸಂಭವಿಸಿದಾಗ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸೂರ್ಯಗ್ರಹಣವು ತುಲಾ ಮತ್ತು ಸ್ವಾತಿ ನಕ್ಷತ್ರದಲ್ಲಿ ಸಂಭವಿಸುತ್ತಿದೆ. ಈ ಕಾರಣದಿಂದಾಗಿ, ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಜನರು ಈ ಸೂರ್ಯಗ್ರಹಣವನ್ನು ನೋಡಬಾರದು.ಅಮಾವಾಸ್ಯೆ ತಿಥಿಯಂದು ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ. ಇದನ್ನು ಕಂಕಣ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಂತಹ ಗ್ರಹಣದಲ್ಲಿ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು ಹೆಚ್ಚು. ಸೂರ್ಯನ ಬೆಳಕು ಭೂಮಿಯನ್ನು ತಲುಪುವ ಮೊದಲು, ಚಂದ್ರನು ಮಧ್ಯದಲ್ಲಿ ಬರುತ್ತಾನೆ, ಇದರಿಂದಾಗಿ ಸೂರ್ಯನ ಕೆಲವು ಭಾಗವು ಮಾತ್ರ ಗೋಚರಿಸುತ್ತದೆ.

ರಾಶಿಗಳ ಮೇಲೆ ಸೂರ್ಯಗ್ರಹಣ ಪ್ರಭಾವವೇನು?

ಮೇಷ: ಮೇಷ ರಾಶಿಯ ಸ್ತ್ರೀಯರಿಗೆ ಈ ಸೂರ್ಯಗ್ರಹಣವು ನೋವುಂಟು ಮಾಡಲಿದೆ.
ವೃಷಭ: ಈ ಸೂರ್ಯಗ್ರಹಣವು ವೃಷಭ ರಾಶಿವರಿಗೆ ಅಷ್ಟೇನೂ ತೊಂದರೆಯಾಗುವುದಿಲ್ಲ.

ಮಿಥುನ: ಮಿಥುನ ರಾಶಿಯವರಲ್ಲಿ ಈ ದೀಪಾವಳಿಯ ಸೂರ್ಯ ಗ್ರಹಣವು ಆತಂಕವನ್ನು ಉಂಟು ಮಾಡಲಿದೆ.

ಕರ್ಕಾಟಕ : ಈ ಸೂರ್ಯ ಗ್ರಹಣವು ಕರ್ಕಾಟಕ ರಾಶಿಯವರಿಗೆ ಯಾತನೆ ಉಂಟುಮಾಡಲಿದೆ.

ಸಿಂಹ: ಸಿಂಹ ರಾಶಿಯವರಿಗೆ(Leo) ಈ ಗ್ರಹಣವು ಕೆಟ್ಟದೇನು ಮಾಡಲಿಕ್ಕಿಲ್ಲ

ಕನ್ಯಾ: ಈ ದೀಪಾವಳಿಯ ಸೂರ್ಯಗ್ರಹಣವು ಕನ್ಯಾ ರಾಶಿಯವರಿಗೆ ಹಾನಿಯುಂಟು ಮಾಡಲಿದೆ

ತುಲಾ: ತುಲಾ ರಾಶಿಯವರಿಗೆ ಈ ಸೂರ್ಯಗ್ರಹಣವು ಶಕ್ತಿ ಹೆಚ್ಚಿಸಲಿದೆ.

ವೃಶ್ಚಿಕ: ಈ ದೀಪಾವಳಿಯ ಸೂರ್ಯಗ್ರಹಣವು ವೃಶ್ಚಿಕ ರಾಶಿಯವರಿಗೆ ಯಾವುದೋ ರೀತಿಯಲ್ಲಿ ನಷ್ಟ ಉಂಟಾಗುವ ಯೋಗವಿದೆ.

ಧನು ರಾಶಿ: ಧನು ರಾಶಿಯವರಿಗೆ ಈ ದೀಪಾವಳಿಯ ಸೂರ್ಯಗ್ರಹಣವು ಹಲವು ರೀತಿಯಲ್ಲಿ ಪ್ರಯೋಜನ ನೀಡಲಿದೆ.

ಮಕರ: ಮಕರ ರಾಶಿಯವರಿಗೆ ಈ ದೀಪಾವಳಿಯ ಸೂರ್ಯಗ್ರಹಣ ಸಂತೋಷವನ್ನುಂಟು ಮಾಡಲಿದೆ.

ಕುಂಭ: ಈ ಸೂರ್ಯಗ್ರಹಣವ ಕುಂಭ ರಾಶಿಯವರಿಗೆ ಯಾವುದೋ ರೀತಿಯಲ್ಲಿ ನಷ್ಟ ಉಂಟು ಮಾಡಲಿದೆ.

ಮೀನ: ಮೀನ ರಾಶಿಯವರಿಗೆ ಈ ದೀಪಾವಳಿಯ ಸೂರ್ಯಗ್ರಹಣವು ಸಾವಿನಂತಹ ಯಾತನೆಯ ಯೋಗವಿದೆ

ಮುಂದಿನ ಸೂರ್ಯಗ್ರಹಣವು ಮಾರ್ಚ್ 29, 2025 ರಂದು ಸಂಭವಿಸುತ್ತದೆ. ಆದಾಗ್ಯೂ, ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಭಾರತದಲ್ಲಿ ಮುಂದಿನ ಬಾರಿ ಭಾಗಶಃ ಸೂರ್ಯಗ್ರಹಣವು ಗೋಚರಿಸಲು ನವೆಂಬರ್ 3, 2032 ರ ವರೆಗೆ ಕಾಯಬೇಕಾಗುತ್ತದೆ.

Leave a Comment

Your email address will not be published. Required fields are marked *