ಆಪ್ತೆ ಶಶಿಕಲಾ ಅವರೇ ಜಯಲಲಿತಾ ಸಾವಿಗೆ ಕಾರಣ| ವರದಿ ಸಲ್ಲಿಸಿದ ತನಿಖಾ ಆಯೋಗ

ಸಮಗ್ರ ನ್ಯೂಸ್: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆಗೆ ಆಯೋಗ ಒಂದನ್ನು ತಮಿಳುನಾಡು ಸರ್ಕಾರ ರಚನೆ ಮಾಡಿತ್ತು. ಈಗ ಆಯೋಗ ವರದಿ ಸಿದ್ಧ ಮಾಡಿದ್ದು, ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

Ad Widget ... ..

ಅದರಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಅವರೇ ಜಯಲಲಿತಾ ಸಾವಿಗೆ ಕಾರಣ ಎಂದು ನ್ಯಾ. ಆರುಮುಗಸ್ವಾಮಿ ಆಯೋಗ ಉಲ್ಲೇಖ ಮಾಡಿದೆ.

Ad Widget

ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ 608 ಪುಟಗಳ ವರದಿಯನ್ನು ಇಂದು ತಮಿಳುನಾಡಿದ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು.

ಈ ಸಮಿತಿ ಹೇಳುವ ಪ್ರಕಾರ ಜಯಲಲಿತಾ ಸಾವಿನಲ್ಲಿ ವಿ.ಕೆ ಶಶಿಕಲಾ, ವೈದ್ಯ ಶಿವಕುಮಾರ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಹಾಗೂ ಮಾಜಿ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ತಪ್ಪಿತಸ್ಥರು. ಅವರ ವಿರುದ್ಧ ತನಿಖೆ ನಡೆಯಬೇಕೆಂದು ಆಯೋಗ ತಿಳಿಸಿದೆ.

Leave a Comment

Your email address will not be published. Required fields are marked *