Ad Widget .

‘ಪಟಾಕಿ ನಿಮ್ದೇ ಆದ್ರೂ ನಾವ್ ಹೇಳ್ದಂಗೇನೇ ಹಚ್ಚಬೇಕು!’ |ಕರ್ನಾಟಕದಲ್ಲಿ ದೀಪಾವಳಿ ಆಚರಣೆಗೆ ಹೊಸ ಗೈಡ್ ಲೈನ್ಸ್

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ‘ಪರಿಸರ ಸ್ನೇಹಿ’ ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ, ಒಂದು ವೇಳೆ ಕಂಡು ಬಂದರೆ ಮುಲಾಜಿ‍ಲ್ಲದೇ ಕ್ರಮ ಕೈಗೊಳ್ಳಿ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಖಡಕ್ ಸೂಚನೆ ನೀಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಒಂದು ವೇಳೆ ಹಸಿರು ಪಟಾಕಿ ಹೊರೆತು ಪಡಿಸಿ ಬೇರೆ ಪಟಾಕಿ ಕಂಡುಬಂದರೆ ಮುಲಾಜಿಲ್ಲದೇ ಸೀಜ್ ಮಾಡುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಗಳಿಗೆ, ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಬಿಬಿಎಂಪಿ, ಅಗ್ನಿ ಶಾಮಕ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.

Ad Widget . Ad Widget . Ad Widget .

ಪಟಾಕಿಯಿಂದಾಗುವ ತ್ಯಾಜ್ಯವನ್ನು ಹೊರಹಾಕಲು ಘನತ್ಯಾಜ್ಯ ವಾಹನಗಳ ನೇಮಕಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಪಟಾಕಿಗಳಿಂದಾಗುವ ಹಾನಿಯನ್ನು ತಪ್ಪಿಸಲು ಅಗ್ನಿಶಾಮಕ ಇಲಾಖೆಯೊಂದಿಗೂ ಚರ್ಚೆ ಮಾಡಿದ್ದು, ವಾಯುಮಾಲಿನ್ಯ ಹೆಚ್ಚಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದೆ. ಪಟಾಕಿ ಸ್ಟಾಲ್​​ಗಳ ಮೇಲೆ ಹದ್ದಿನ ಕಣ್ಣಿಡಲು ಪೋಲಿಸ್ ಇಲಾಖೆಗೂ ಸೂಚನೆ ನೀಡಲಾಗಿದೆ.

ಹಸಿರು ಪಟಾಕಿಗಳು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (NEERI) ಆವಿಷ್ಕಾರವಾಗಿದೆ ಮತ್ತು ಅವು ಶಬ್ದದಿಂದ ನೋಟಕ್ಕೆ ಸಾಂಪ್ರದಾಯಿಕ ಪಟಾಕಿಗಳನ್ನು ಹೋಲುತ್ತವೆ. ಆದರೆ ಅವುಗಳನ್ನು ಸುಟ್ಟಾಗ ಮಾಲಿನ್ಯವು ತುಂಬಾ ಕಡಿಮೆ ಮತ್ತು ಸಾಮಾನ್ಯ ಪಟಾಕಿಗಳಿಗಿಂತ 40 ಸೆಂ.ಮೀ. 50% ಕಡಿಮೆ ಹಾನಿಕಾರಕ ಅನಿಲವನ್ನು ಹೊರಸೂಸುತ್ತವೆ.

Leave a Comment

Your email address will not be published. Required fields are marked *