Ad Widget .

ಪರೇಶ್ ಮೇಸ್ತಾ ಕೊಲೆ ಪ್ರಕರಣ| ಮರು ತನಿಖೆಗೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ

ಸಮಗ್ರ‌ ನ್ಯೂಸ್: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ಬೆನ್ನಲ್ಲೇ ಇದೀಗ ಪರೇಶ್ ಮೆಸ್ತಾ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ.

Ad Widget . Ad Widget .

ಸಿಬಿಐ ವರದಿಗೆ ಪರೇಶ್ ಮೆಸ್ತಾ ತಂದೆ ಕಮಲಾಕರ ಮೇಸ್ತಾ ಕೂಡಾ ಅಸಮಾಧಾನ ವ್ಯಕ್ತಪಡಿಸಿ, ಕೇಸ್‍ನ ಮರು ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಬಿಐ ವರದಿ ಬಂದು ಈಗಾಗಲೇ ಎರಡು ವಾರಕ್ಕೂ ಹೆಚ್ಚು ಕಾಲವಾಗಿದ್ದು, ಮರು ತನಿಖೆ ಆದೇಶ ಮಾಡಬೇಕೆಂದು ಒತ್ತಡ ಜೋರಾಗಿದೆ.

Ad Widget . Ad Widget .

ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಡೆದ ಗಲಭೆಯಲ್ಲಿ ಹೊನ್ನಾವರದ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರ ನಗರದ ಶನಿ ದೇವಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಶವ ಪತ್ತೆಯಾಗಿತ್ತು.

ಭಾರೀ ಸಂಚಲನ ಉಂಟು ಮಾಡಿದ್ದ ಪ್ರಕರಣವನ್ನು ಆಗಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಸಿಬಿಐ ತನಿಖೆಗೆ‌ ವಹಿಸಿದ್ದರು.

Leave a Comment

Your email address will not be published. Required fields are marked *