Ad Widget .

ಅಸ್ವಸ್ಥ ವೃದ್ದೆಯನ್ನು ಜೀವಂತ ತಿಂದ ನಾಯಿಗಳು| ವೃದ್ದೆಯ ಗುರುತು ಪತ್ತೆಗಾಗಿ ಪೋಲೀಸರ ಶೋದ|

ಸಮಗ್ರ ನ್ಯೂಸ್: ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಬೀದಿನಾಯಿಗಳು ತಿಂದ ಬೀಭತ್ಸ ಘಟನೆ ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ದೇವಲ ಗಾಣಗಾಪುರ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಕಳೆದ ಮೂರು ದಿನಗಳ ಹಿಂದೆ ಅಪರಿಚಿತ ವಾಹನವೊಂದು ವೃದ್ಧೆಯನ್ನು ಡಿಕ್ಕಿ ಹೊಡೆದಿತ್ತು. ಈ ವೇಳೆ ವಾಹನ ಚಾಲಕ ವೃದ್ಧೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮತ್ತೆ ರಸ್ತೆ ಪಕ್ಕದಲ್ಲಿ ಬಿಸಾಡಿ ಪರಾರಿಯಾಗಿದ್ದಾನೆ.

Ad Widget . Ad Widget .

ಅಸ್ವಸ್ಥಗೊಂಡ ವೃದ್ದೆಯನ್ನು 4 5 ಬೀದಿನಾಯಿಗಳು ಸೇರಿಕೊಂಡು ಸಂಪೂರ್ಣವಾಗಿ ತಿಂದುಹಾಕಿ ಅಸ್ತಿಪಂಜರ ರೂಪದಲ್ಲಿ ವೃದ್ದೆಯ ಶವ ಪತ್ತೆಯಾಗಿದೆ. ವೃದ್ಧೆಯ ಶವವನ್ನು ಗಾಣಗಾಪುರ ಪೊಲೀಸರು ಮತ್ತು ಗ್ರಾಮಸ್ಥರು ಸೇರಿಕೊಂಡು ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

ವೃದ್ದೆಯ ಹೆಸರು ಮತ್ತು ವಿಳಾಸ ತಿಳಿದುಬಂದಿಲ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಯ ಹೆಸರು ವಿಳಾಸ ಪತ್ತೆ ಹಚ್ಚುವ ಕಾರ್ಯ ನಡೆಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಶ್ರೀ ದತ್ತಾತ್ರೇಯ ದೇವರ ಸನ್ನಿದಿ ದೇವಲಗಾಣಗಾಪುರ ಈ ಘಟನೆ ನಡೆದಿದು ಸಾರ್ವಜನಿಕರು ಭಯಭೀತರಾಗಿದ್ದಾರೆ.

ವರದಿ: ಸಿದ್ದನಗೌಡ ಬಿರೇದಾರ, ಸಮಗ್ರ ನ್ಯೂಸ್

Leave a Comment

Your email address will not be published. Required fields are marked *