Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Ad Widget . Ad Widget .

ಮೇಷ:
ಈ ರಾಶಿಯವರು ಗ್ರಹಣ ಕಾಲವನ್ನು ಬಹಳ ಎಚ್ಚರವಾಗಿ ದಾಟುವ ಅವಶ್ಯಕತೆ ಇದೆ. ಗ್ರಹಣವೆಂಬುದು ಸೂರ್ಯ ಚಂದ್ರರ ಸುತ್ತ ರಾಹು ಕೇತುಗಳು ಬಂದಾಗ ಅದು ತನ್ನ ಪ್ರಭಾವವನ್ನು ತೋರಿ, ಅಂದರೆ ಸೂರ್ಯನಿಗೆ ಬೆಳಕನ್ನು ಅಡ್ಡಗಟ್ಟಿ ಕೆಲವೊಂದು ಅಣುಗಳು ಹೊರಬಂದು ಆರೋಗ್ಯದಲ್ಲಿ ಪರಿವರ್ತನೆ ಮಾಡುತ್ತದೆ. ಆದ್ದರಿಂದ ಸೂರ್ಯನನ್ನು ಪ್ರಾರ್ಥಿಸಿ. ಅಂಗಾರಕನಿಗೆ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ಶುಭವಾಗುತ್ತದೆ. ಬಾಂಧವ್ಯಗಳನ್ನು ಎಚ್ಚರವಾಗಿ ಕಾಪಾಡಿಕೊಳ್ಳಿ. ಆರೋಗ್ಯಕ್ಕೆ ಒತ್ತಡಕ್ಕೆ ಗುರು-ಶನಿ ಪ್ರಾರ್ಥನೆ ಅಗತ್ಯ.

Ad Widget . Ad Widget .

ವೃಷಭ:
ವೃಷಭ ರಾಶಿಯಿಂದ 5ನೇ ಮನೆಯಲ್ಲಿ ಗ್ರಹಣ ದೋಷವಿದ್ದರೂ, ಅದರ ಬಾಧೆ ಇರುವುದಿಲ್ಲ. ಆದರೆ, ನಾವು ಲಗ್ನದಲ್ಲಿರುವ ಶುಕ್ರನನ್ನು, ಮಹಾವಿಷ್ಣುವನ್ನು ಪ್ರಾರ್ಥಿಸಿ ಸುಖವನ್ನು ಕಂಡುಕೊಳ್ಳಿ. ಹಣದ ಒತ್ತಡ ಬಹಳವಾಗಿರುತ್ತದೆ. ಎಚ್ಚರವಾಗಿ ನಿಭಾಯಿಸಿ. ದುರ್ಗಾಷ್ಟೋತ್ತರ ಪಾರಾಯಣ ಮಾಡಿ.

ಮಿಥುನ:
ಮಿಥುನ ರಾಶಿಯವರಿಗೆ ಗುರು ಶುಭವನ್ನು ಕೊಡುತ್ತಾನೆ. ಅಷ್ಟಮ ಶನಿಯು ಮನಸ್ಸಿಗೆ ಉದ್ವೇಗವನ್ನು, ಕಾರ್ಯಗಳಲ್ಲಿ ತೊಡಕನ್ನು ಉಂಟು ಮಾಡುತ್ತಾನೆ. ಅಷ್ಟಮ ಶನಿಗೆ ಪ್ರಾರ್ಥನೆ ಇರಲಿ. ವೇದ ಪಂಡಿತರಿಂದ ಉದ್ಯುಕ್ತ ಶನಿ-ಶಾಂತಿ ಮಾಡಿದರೆ ಒಳ್ಳೆಯ ಫಲವನ್ನು ಪಡೆಯಬಹುದು. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ನಿಮ್ಮ ದೈವಬಲ ವೃದ್ಧಿ ಮಾಡಿಕೊಳ್ಳಿ.

ಕಟಕ:
9ರ ಗುರುವು ನಿಮ್ಮನ್ನು ಜೋಪಾನವಾಗಿ ಕಾಪಾಡಿ ನಿಮ್ಮ ಇಷ್ಟಾರ್ಥ ಪೂರೈಸಿ ಸ್ವಂತ ನಿರ್ಧಾರಗಳನ್ನು ದೈರ್ಯದಿಂದ ತೆಗೆದುಕೊಳ್ಳುವಂತೆ ಮಾಡಿರುತ್ತಾನೆ. ಗುರು ಕಟಾಕ್ಷ ಬಂದಿದ್ದರೆ ಏನನ್ನು ಪಡೆಯಬಹುದು ಎಂಬುದಕ್ಕೆ ಕಟಕ ರಾಶಿಯಲ್ಲಿ ಜನಿಸಿದವರೇ ಸಾಕ್ಷಿಯಾಗಿರುತ್ತಾರೆ. ಗುರುವಿನ ಪ್ರಾರ್ಥನೆ ಹೆಚ್ಚು ಮಾಡಿ ಇರಿಸಿ ಮುಂದುವರಿಯಿರಿ. ಸ್ವಕ್ಷೇತ್ರ ಸಪ್ತಮ ಶನಿ ಇರುವುದರಿಂದ ಬಾಧೆಯನ್ನು ಕೊಡಲಾರನು. ಸುಂದರಕಾಂಡ ಪಾರಾಯಣ ಮಾಡಿ. ಸುಖಕ್ಕೆ ಕಡಿಮೆಯಿಲ್ಲ. ಲಾಭಕ್ಕೆ ಚಿಂತೆಯಿಲ್ಲ. ನಿಮ್ಮ ಆನಂದವೂ ಸಮೃದ್ಧಿಯಾಗಿರುತ್ತದೆ.

ಸಿಂಹ:
ಗುರುಬಲ ಇಲ್ಲದಿದ್ದರೂ ಗುರು ಸ್ವಕ್ಷೇತ್ರದಲ್ಲಿ ಇದ್ದು, ದಾರಿಯನ್ನು ತೋರುತ್ತಾನೆ. ದೇವರನ್ನೂ ವೈದ್ಯರನ್ನೂ ತೋರುತ್ತಾನೆ. ಬೇಕಾದ್ದನ್ನು ಆಯ್ದುಕೊಂಡು ಶರೀರಕ್ಕೂ, ಮನಸ್ಸಿಗೂ, ಸಂತೋಷಕ್ಕೂ ಬೇಕಾದ್ದನ್ನು ಪಡೆಯಲು ಮಹಾದೇವರ ಸೃಷ್ಟಿಯಾದ ಶನೀಶ್ವರನು ಷಷ್ಠದಲ್ಲಿರುವುದೇ ಶುಭವು. ಸೂರ್ಯನನ್ನು, ಸುಬ್ರಹ್ಮಣ್ಯ ದೇವರನ್ನು ಸದಾ ಅರ್ಚಿಸಿ, ಪೂಜಿಸಿ.

ಕನ್ಯಾ:
ಕನ್ಯಾ ರಾಶಿಯಲ್ಲಿ ಲಗ್ನದಲ್ಲೇ ಗ್ರಹಣವು ಸಂಭವಿಸುವುದರಿಂದ ಎಚ್ಚರಿಕೆಯಿಂದ ಸಾಗಿ. ಮಧ್ಯಾಹ್ನದಿಂದ ಸೂರ್ಯಾಸ್ತದವರೆಗೆ ಧ್ಯಾನಾಸಕ್ತರಾಗಿ ಇಷ್ಟ ದೇವರನ್ನು ಪೂಜಿಸಿ. ಹಸ್ತ, ಉತ್ತರ, ಚಿತ್ತಾ ನಕ್ಷತ್ರದವರು ಆದಿತ್ಯಾದಿ ನವಗ್ರಹಗಳ ಸ್ತೋತ್ರ ಪಾರಾಯಣ ಮಾಡಿ. ಗ್ರಹಣ ದೋಷವನ್ನು ಕಳೆಯಲು ಪಂಚಾಂಗದಲ್ಲಿ ಬರೆದಿರುವ ಮಂತ್ರವನ್ನು ಪಠಿಸಿ, ಗೋಧಿಯನ್ನು, ಹುರುಳಿಯನ್ನು ದಕ್ಷಿಣೆ ಸಹಿತ ದಾನ ನೀಡಿ. ಅಕ್ಕಿ, ತೊಗರಿಬೇಳೆ ದಾನ ಮಾಡಿ.

ತುಲಾ:
ಎಡಬಿಡದೆ ಕಾರ್ಯಗಳಲ್ಲಿ ತೊಡಕು-ತೊಂದರೆಗಳು ಉಂಟಾದರೂ ಸಹಿಸಿಕೊಂಡು ಮುಂದೆ ಸಾಗಿ ಜೀವನವನ್ನು ರೂಪಿಸಿಕೊಂಡಿದ್ದೀರಿ. ಚಿತ್ತಾ, ವಿಶಾಖ, ಸ್ವಾತಿ ನಕ್ಷತ್ರದ ಮೂಲವೇ ತುಲಾ ರಾಶಿ ಗ್ರಹಣ ಬಾಧೆಯಿರುವುದರಿಂದ ಇಷ್ಟ ದೇವರನ್ನು ಪೂಜಿಸಿ. ಭವಗ್ರಹ ಸ್ತೋತ್ರ ಪಾರಾಯಣ ಮಾಡಿ. ನವಗ್ರಹ ಧಾನ್ಯ ದಾನ ಕೊಡಿ. ಗ್ರಹಣ ಕಳೆದ ನಂತರ ವಿಶೇಷ ಯೋಗವೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ವೃಶ್ಚಿಕ:
ತೃತೀಯ ಶನಿ, ಪಂಚಮ ಗುರು ಇಬ್ಬರೇ ಸಾಕು ನಿಮ್ಮನ್ನು ನಡೆಸಲು. ಮನುಷ್ಯನಿಗೆ ಎರಡು ಕಾಲು. ಪ್ರಾಣಿಗಳಿಗೆ ನಾಲ್ಕೂ ಕಾಲು. ಆದರೆ, ನೀವು ನಿಮ್ಮ ಹೆಜ್ಜೆಯನ್ನು ಸರಿಯಾಗಿ ಇರಿಸಿ. ನಿಮಗೆ ಅಮೃತವನ್ನು ಕೊಟ್ಟ ಕುಲದೇವರನ್ನು ಧ್ಯಾನ ಮಾಡಿ ಪೂಜಿಸಿ. ಅನಂತವಾಗಿ ಧನವೂ-ಸುಖವೂ ಲಭಿಸುತ್ತದೆ.

ಧನಸ್ಸು:
ಧನುರ್ ರಾಶಿಯವರು ಬಿಡುವ ಶನಿಯಿಂದ ಬಾಡಿ ಹೋಗಬಾರದು. ಬಾಡದಂತೆ ಶರೀರವನ್ನು ಕಾಪಾಡಿಕೊಂಡು ಬಿಟ್ಟ ಬಾಣದಿಂದ ಗುರಿ ಮುಟ್ಟಬೇಕು. ಧೈರ್ಯವಿರಬೇಕು. ಮನಃಶಾಂತಿಯಿಂದ ಮನಸ್ಸು ದೃಢವಾಗಿರಬೇಕು. ಇಷ್ಟವನ್ನು ಸಾಧಿಸಲು ಬರಬೇಕಾದರೆ ಗುರುವಿನ ಧ್ಯಾನವಿರಬೇಕು. ಶನಿಯಿಂದ ರಾಜಯೋಗವನ್ನು ಪಡೆಯುವ ಸಮಯ ಹತ್ತಿರದಲ್ಲಿದೆ.

ಮಕರ:
ಒಂದು ಕಡೆ ಲೋಕಕ್ಕೆ ಗ್ರಹಣ ಬರುತ್ತದೆ. ಮತ್ತೊಂದೆಡೆ ದ್ವಾದಶ ಶನಿಯು ನಿಮ್ಮನ್ನು ಸೋತ ರುಚಿಯಿಲ್ಲದ ಸೋರೆಕಾಯಿಯಂತೆ ಮಾಡಿದ್ದಾನೆ. ನೀವು ಈ ಸಮಯದಲ್ಲಿ ಶಿವ ಪಂಚಾಕ್ಷರಿ ಧ್ಯಾನ ಮಾಡಿ ಶಿವನನ್ನು ಒಲಿಸಿಕೊಳ್ಳಿ. ಉಳಿದಿರುವ ಶನಿಯ ಕಾಲ ಶಿವಧ್ಯಾನದಲ್ಲಿ ಕಳೆದು, ಮುಂದೆ ಸಂತೋಷ, ಸುಖವನ್ನು ಕಾಣುವಿರಿ. ಬೇಡದ ವಸ್ತು ವಿಚಾರದ ಜ್ಞಾನವಿರಲಿ.

ಕುಂಭ:
ಕುಂಭ ರಾಶಿಗೆ ಶನಿ ದ್ವಾದಶದಿಂದ ದಾಟಿ ಜನ್ಮಕ್ಕೆ ಬರುತ್ತಾನೆ. ಸ್ವಕ್ಷೇತ್ರದಲ್ಲಿರುತ್ತಾನೆ. ದ್ವಿತೀಯದಲ್ಲಿ ಗುರುವಿದ್ದಾನೆ. ಗುರುಬಲವು ಎಲ್ಲ ಗ್ರಹಬಲವಿದ್ದಂತೆ. ಪರಮಾತ್ಮನು ನಿಮ್ಮ ಜೊತೆಯಿದ್ದಾನೆ. ಧೈರ್ಯದಿಂದ ಲೋಕವನ್ನು ಗೆಲ್ಲಬೇಕು. ಜನರನ್ನು ಆಕರ್ಷಿಸಲು ಮಾತು ಒಳ್ಳೆಯದಾಗಿರಲಿ. ಸನ್ಮಾರ್ಗದಲ್ಲಿ ಬದುಕಿದರೆ ಧನವನ್ನು, ಸುಖವನ್ನು ಪಡೆಯಬಹುದು.

ಮೀನ:
ಲಗ್ನದಲ್ಲೇ ಗುರುವು ಇರುವುದು ನಿಮ್ಮನ್ನು ಯಾವಾಗಲಾದರೂ ಒಮ್ಮೆ ಚಿಂತಾತುರರಾಗುವಂತೆ ಮಾಡುತ್ತದೆ. ಸಮೃದ್ಧ ಶನಿಯಿದ್ದು, ದೇವರ ದೇವರಾದ ಮಹಾದೇವ ಗುರುವೇ ನಿಮಗೆ ರಕ್ಷಣೆ ನೀಡುತ್ತಾನೆ. ಈಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ. ಶಿವನ ಮಂದಿರದಲ್ಲಿ ಕುಳಿತು ಶಿವನ ಧ್ಯಾನವನ್ನು ಮಾಡಿ ಶಿವ ಸಹಸ್ರನಾಮ ಪಾರಾಯಣ ಮಾಡಿರಿ. ಮೇಷದಿಂದ ಮೀನರಾಶಿಯವರು ತಮಗಾಗಿಯೂ ನಮ್ಮ ರಾಷ್ಟ್ರದ ಪ್ರಜೆಗಳಿಗಾಗಿಯೇ ಗ್ರಹಣಕಾಲದ ಬಾಧೆ ಬರಬಾರದೆಂದು ಪ್ರಾರ್ಥಿಸಿ.

Leave a Comment

Your email address will not be published. Required fields are marked *