Ad Widget .

ನಾಳೆಯಿಂದ ಶಾಲೆಗಳು ಪುನರಾರಂಭ| ಸಂಕಲನಾತ್ಮಕ ಪರೀಕ್ಷೆಗಳು ನ. 3ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲು ಶಾಲೆಗಳಿಗೆ ನೀಡಲಾಗಿದ್ದ ದಸರಾ‌ ರಜೆ ಅ.16ಕ್ಕೆ ಮುಕ್ತಾಯವಾಗಿದ್ದು, ನಾಳೆ(ಅ.17)ಯಿಂದ ರಾಜ್ಯಾದ್ಯಂತ 1ರಿಂದ 10ರವರೆಗಿನ‌ ತರಗತಿಗಳು ಆರಂಭವಾಗಲಿವೆ.

Ad Widget . Ad Widget .

ಅಕ್ಟೋಬರ್ 17 ರ ನಾಳೆಯಿಂದ ರಾಜ್ಯದ 1 ರಿಂದ 10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲು ಉದ್ದೇಶಿಸಲಾಗಿದ್ದ ಸಂಕಲನಾತ್ಮಕ ಪರೀಕ್ಷೆಯನ್ನು ನವೆಂಬರ್ 3 ಕ್ಕೆ ಮುಂದೂಡಿಕೆ ಮಾಡಲಾಗಿದೆ.

Ad Widget . Ad Widget .

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, 1 ರಿಂದ 10 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಅಕ್ಟೋಬರ್ 17 ರಿಂದ ಅಕ್ಟೋಬರ್ 27 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಮೊದಲ ಸಂಕಲನಾತ್ಮಕ ಪರೀಕ್ಷೆಯನ್ನು ನವೆಂಬರ್ 3 ರಿಂದ 10 ರವರೆಗೆ ನಡೆಸಲು ಉದ್ದೇಶಿಸಲಾಗಿದೆ.

ಕಲಿಕಾ ಪ್ರಕ್ರಿಯೆ ಅನುಪಾಲನೆ ಕೊರತೆಯಿಂದಾಗಿ ಹಾಗೂ ಮಕ್ಕಳಿಗೆ ಪರೀಕ್ಷೆಗೆ ಮಾನಸಿಕವಾಗಿ ಸಿದ್ಧವಾಗಲು ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ಪರಿಗಣಿಸಿ ಪರೀಕ್ಷೆಯನ್ನು ಮುಂದೂಡಿ ಸಾರ್ವನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Leave a Comment

Your email address will not be published. Required fields are marked *