ಕುಕ್ಕೆ ಸುಬ್ರಹ್ಮಣ್ಯ: ಸೂರ್ಯಗ್ರಹಣ ಹಿನ್ನೆಲೆ| ಅ.25ರಂದು ದೇವಸ್ಥಾನದಲ್ಲಿ ಸೇವಾ ಕಾರ್ಯಗಳಿಗೆ ಬ್ರೇಕ್

ಸಮಗ್ರ ನ್ಯೂಸ್: ಸೂರ್ಯಗ್ರಹಣ ಸಂಭವಿಸುವ ಹಿನ್ನಲೆಯಲ್ಲಿ ಅ.25ರಂದು ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳನ್ನು ರದ್ದುಪಡಿಸಲಾಗಿದೆ. ದೇವಾಲಯದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ಭೋಜನ ಪ್ರಸಾದ ವ್ಯವಸ್ಥೆಯು ಕೂಡ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Ad Widget ... ..

ಅ.26ರ ಬುಧವಾರದಂದು ಶ್ರೀ ದೇವರ ನಿತ್ಯದ ಪೂಜಾ ಸಮಯದಲ್ಲಿ ವ್ಯತ್ಯಯವಾಗುವುದರಿಂದ ಭಕ್ತಾದಿಗಳಿಗೆ ಬೆಳಿಗ್ಗೆ 9 ರಿಂದ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

Ad Widget

Leave a Comment

Your email address will not be published. Required fields are marked *