Ad Widget .

ಬಿಗ್ ಬಾಸ್ ಮನೆಯಲ್ಲಿ ಮೈಮರೆತು ರೋಮ್ಯಾನ್ಸ್ ನಲ್ಲಿ ಮುಳುಗಿದ ಸಾನ್ಯಾ-ರೂಪೇಶ್| ಈ ಮನೆ ಅದಕ್ಕಲ್ಲ ಎಂದ ಸುದೀಪ್

ಸಮಗ್ರ ನ್ಯೂಸ್: ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆಗಿದ್ದಾರೆ. ಇಬ್ಬರೂ ದೊಡ್ಮನೆಯಲ್ಲಿ ಸುತ್ತಾಡಿಕೊಂಡು ಹಾಯಾಗಿದ್ದಾರೆ. ರಾತ್ರಿ ಲೈಟ್ ಆಫ್​ ಆದ ನಂತರವೂ ಇವರು ಹಗ್ ಮಾಡಿಕೊಂಡು ಮಾತನಾಡಿಕೊಂಡಿರುತ್ತಾರೆ. ಈಗ ಈ ಜೋಡಿಯ ರೊಮ್ಯಾನ್ಸ್ ಮಿತಿ ಮೀರಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಗಟ್ಟಿಯಾಗೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸುದೀಪ್ ಆಡಿದ ಮಾತಿಗೆ ಗಳಗಳನೆ ಅತ್ತಿದ್ದಾರೆ ರೂಪೇಶ್.

Ad Widget . Ad Widget .

ಇತ್ತೀಚೆಗೆ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಕ್ಯಾಪ್ಟನ್ಸಿ ರೂಂನಲ್ಲಿ ಕುಳಿತಿದ್ದರು. ಆಗಲೇ ಆರ್ಯವರ್ಧನ್ ಅವರ ಕ್ಯಾಪ್ಟನ್ಸಿ ಅವಧಿ ಮುಗಿದಿತ್ತು. ಆದಾಗ್ಯೂ ಈ ರೂಂ ಬಳಕೆ ಮಾಡಿದ್ದರು ರೂಪೇಶ್ ಹಾಗೂ ಸಾನ್ಯಾ. ರೂಪೇಶ್ ಮೈಮೇಲೆ ಸಾನ್ಯಾ ಮಲಗಿದ್ದರು. ಈ ಪ್ರೋಮೋವನ್ನು ಕಲರ್ಸ್ ಕನ್ನಡ ಹಂಚಿಕೊಂಡಿದೆ. ಈ ಘಟನೆ ವಿಚಾರಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

Ad Widget . Ad Widget .

ಕ್ಯಾಪ್ಟನ್ಸಿ ಅವಧಿ ಮುಗಿದ ನಂತರ ನೀವು ಪಿಕ್​ನಿಕ್ ಮಾಡ್ತಾ ಇದ್ರಿ. ಆ ರೂಂಗೆ ಒಂದು ಗೌರವ ಇದೆ. ಅದು ಪಿಕ್​ನಿಕ್ ಸ್ಪಾಟ್​ ಅಲ್ಲ’ ಎಂದರು ಸುದೀಪ್. ಇದಕ್ಕೆ ರೂಪೇಶ್ ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ‘ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಲು ಬಂದರು ರೂಪೇಶ್.

‘ನೀವು ಮಿತಿಮೀರಿ ನಡೆದುಕೊಂಡಿದ್ದೀರಿ. ಆ ರೀತಿ ಆಗಿದ್ದಕ್ಕಾಗಿಯೇ ನಾವು ಹೇಳ್ತಿರೋದು. ನೀವು ಮಧ್ಯರಾತ್ರಿ ಹಗ್ ಮಾಡಿಕೊಳ್ತೀರಿ. ಅದಕ್ಕೆ ನಾವು ಯಾವಾಗಲೂ ಅಪಸ್ವರ ತೆಗೆದಿಲ್ಲ. ಅದು ಇಲ್ಲಿ ಸಮಸ್ಯೆ ಅಲ್ಲ. ಈ ಮೊದಲು ಅನೇಕರು ಈ ಮನೆಯಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇದನ್ನು ಹೇಳ್ತಿದೀವಿ ಎಂದರೆ ಅರ್ಥ ಮಾಡಿಕೊಳ್ಳಿ. ನೀವು ಈ ರೀತಿ ಮಾಡ್ತಾ ಇರೋದ್ರಿಂದಲೇ ನಮಗೆ ಕಟೆಂಟ್ ಸಿಗುತ್ತಿದೆ ಎಂದುಕೊಂಡರೆ ಈ ಮನೆ ಅದಕ್ಕಲ್ಲ’ ಎಂದು ಸುದೀಪ್ ಎಚ್ಚರಿಕೆ ನೀಡಿದರು.

ಒಟ್ಟಾರೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಒಂದಿಲ್ಲೊಂದು ಗಿಮಿಕ್ ಮಾಡುತ್ತಾ ಸ್ಪರ್ಧಿಗಳು ಟ್ರೋಲ್ ಆಗ್ತಿದಾರೆ.

Leave a Comment

Your email address will not be published. Required fields are marked *