ಸಮಗ್ರ ನ್ಯೂಸ್: ಬ್ರಿಟನ್ ಪ್ರಧಾನಿ ಸ್ಥಾನ ಮತ್ತು ಪಕ್ಷದ ನಾಯಕತ್ವ ಸ್ಥಾನದಿಂದ ಲಿಜ್ ಟ್ರಸ್ ಅವರನ್ನು ಕೆಳಗಿಳಿಸಿ, ಅವರ ಸ್ಥಾನಕ್ಕೆ ಪರಾಜಿತ ಅಭ್ಯರ್ಥಿ ರಿಷಿ ಸುನಕ್‌ರನ್ನು ಕೂರಿಸಲು ಕನ್ಸರ್ವೇಟಿವ್ ಪಕ್ಷದ ಅನೇಕ ಬಂಡಾಯ ಸದಸ್ಯರು ಯೋಜಿಸಿದ್ದಾರೆ ಎನ್ನಲಾಗಿದೆ.
“ದಿ ಟೈಮ್ಸ್’ ನಡೆಸಿದ ಸಮೀಕ್ಷೆಯ ಪ್ರಕಾರ, ಟ್ರಸ್ ಮತ್ತು ಸುನಕ್ ನಡುವಿನ ಪಕ್ಷದ ನಾಯಕತ್ವದ ಆಯ್ಕೆ ರೇಸ್‌ನಲ್ಲಿ ಪಕ್ಷದ ಸದಸ್ಯರು ತಪ್ಪು ಆಯ್ಕೆ ಮಾಡಿದ್ದಾರೆ ಎಂದು ಕನ್ಸರ್ವೇ ಟಿವ್ ಪಕ್ಷದ ಶೇ.62ರಷ್ಟು ಬೆಂಬಲಿಗರು ಅಭಿ ಪ್ರಾಯಪಟ್ಟಿದ್ದಾರೆ. ಶೇ.15ರಷ್ಟು ಮಂದಿ ಆಯ್ಕೆ ಸರಿಯಾಗಿದೆ ಎಂದಿದ್ದಾರೆ.
ಜನಪರವಲ್ಲದ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಈಗಾಗಲೇ ಲೀಜ್ ಟ್ರಸ್ ತಮ್ಮ ಹಣಕಾಸು ಸಚಿವರನ್ನು ಹುದ್ದೆಯಿಂದ ಕೆಳಗಿಳಿಸಿದ್ದು, ಮುಂದೆ ತಮ್ಮನೇ ಕೆಳಗಿಳಿಸಲಾಗುವ ಇತರ ಸದಸ್ಯರ ಯೋಜನೆಯ ಬಗ್ಗೆ ಲೀಜ್ ಟ್ರಸ್ ಗೆ ಮತ್ತೊಂದು ತಲೆನೋವು ಎದುರಾಗಿದೆ. ಒಂದು ವೇಳೆ ಹಾಗಾದಲ್ಲಿ ರಿಷಿ ಸುನಕ್ ಪ್ರಧಾನಿ ಪಟ್ಟವೇರುವ ನಿರೀಕ್ಷೆಯಿದೆ.