Ad Widget .

“ದೇಶ,‌ ರಾಜ್ಯ ಇಬ್ಭಾಗವಾಗುತ್ತೆ, ಶಿವನಾಣೆ ಇದು ಸತ್ಯ”| ಹಾಸನದಲ್ಲಿ ಮತ್ತೊಮ್ಮೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

ಸಮಗ್ರ ನ್ಯೂಸ್: ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ, ಶಿವನ ಆಣೆ ಮೇಲೆ ಸತ್ಯ. ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ. ಭಾರತ ದೇಶ ಎರಡು ಆಗುತ್ತೆ, ಎರಡು ರಾಷ್ಟ್ರಪತಿ ಆಗೋದು ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ಧಾರೆ. ಇದು ನಡೆಯೋದು ನಿಜ, ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

Ad Widget . Ad Widget .

ರಾಜ್ಯದಲ್ಲಿ ಸಣ್ಣ ವಯಸ್ಸಿನವರು ಸಿಎಂ ಆಗ್ತಾರೆ ಎಂಬ ಕಾರ್ಣಿಕ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ರಹ್ಮಾಂಡ ಗುರೂಜಿ, ಸಣ್ಣ ವಯಸ್ಸಿನವರು ಸಿಎಂ ಅಂತಾ ಅದರ ಅರ್ಥ ಅಲ್ಲ, ಸಣ್ಣ ವಯಸ್ಸಿನ ನವರು ಆಗಲು ಯಾರೂ ಬಿಡಲ್ಲ. ಸಣ್ಣ ಅನುಭವ ಇರುವವರು ಎನ್ನೋದು ಇದರ ಅರ್ಥ. ಬುಡಕಟ್ಟು ಜನಾಂಗದವರು ರಾಷ್ಟಪತಿ ಆಗಿರುವಂತೆ, ಪ್ರತಿ ಒಬ್ಬರಿಗೂ ಒಂದು ಅವಕಾಶ ಸಿಗುತ್ತೆ. ಈಗ ಶನಿ ರಾಜ ಇರುವ ಕಾರಣ ಶನಿ ಶೂದ್ರಪ್ರಿಯ. ಹಾಗಾಗಿ ಕಂಡು ಕಾಣದವರನ್ನ ಕರೆದುಕೊಂಡು ಬಂದು ಸಿಎಂ ಮಾಡೋ ಅವಕಾಶ ಆಗಬಹುದು. ಈ ಬೆರಕೆ ಸರ್ಕಾರದಲ್ಲಿ ಯಾರು ಆಗ್ತಾರೊ ಗೊತ್ತಿಲ್ಲ ಎಂದು ಹೇಳಿದ್ದಾರೆ.

Ad Widget . Ad Widget .

ಅಲ್ಲದೇ, ಮುಂದೆ ನಮಗೆ ಇರೋದು ಕೇವಲ 31 ವರ್ಷ ಮಾತ್ರ. ಕರ್ನಾಟಕ ಮೂರು ಭಾಗ ಆಗೋದು ಸತ್ಯ. ಮೂರು ಸಿಎಂ ಮೂರು ರಾಜ್ಯಪಾಲರು ಆಗುತ್ತಾರೆ. ಆಂದ್ರ ಎರಡಾಯಿತು ನಮ್ಮದು ಒಂದು ಕೈ ಮೇಲಾಗಿ ಮೂರಾಗುತ್ತೆ. ವಿಧಾನಸೌಧ ಮುಳುಗುತ್ತೆ ಎಂದು ವೀರ ಪ್ರಮೇಯದಲ್ಲಿ ಬರೆದಿದೆ. ಘಟಪ್ರಭಾ ಮಲಪ್ರಭಾದಲ್ಲಿ ಪ್ರವಾಹ ಆಗಿದೆ. ಬೆಳಗಾವಿ ಭಾಗ ಕೂಡ ಒಂದು ರಾಜ್ಯ ಆಗುತ್ತೆ. ಈ ಬಾರಿ ಜನರು ಮತ ಹಾಕುವಾಗ ಯೋಚಿಸಿ ಮತ ನೀಡಿ.ಯಾರು ಕೆಲಸ ಮಾಡುತ್ತಾರೆ ಅವರಿಗೆ ಒಳ್ಳೆ ವ್ಯಕ್ತಿತ್ವದ, ಒಳ್ಳೆ ಮನುಷ್ಯ ನಿಗೆ ಆಯ್ಕೆ ಮಾಡಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

Leave a Comment

Your email address will not be published. Required fields are marked *