ಬೆಳ್ತಂಗಡಿ: ಮೂರು ದಿನಗಳ ಹಿಂದೆ ದುಬೈನಲ್ಲಿ ಉದ್ಯೋಗಕ್ಕೆ ಸೇರಿದ್ದ ಯುವಕ ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್: ಹೊರ ದೇಶವಾದ ದುಬೈನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಳ್ತಂಗಡಿಯ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಕುವೆಟ್ಟು ನಿವಾಸಿ ಪ್ಲೇವಿನ್ ಅವಿನ್ ರೊಡ್ರಿಗಸ್ ಎಂದು ತಿಳಿದುಬಂದಿದೆ.

Ad Widget ... ..

ಕುವೆಟ್ಟು ಸರ್ಕಾರಿ ಶಾಲೆಯ ಬಳಿಯ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರನಾಗಿರುವ ನಿವಾಸಿ ಕೇವನ್ ಅವಿನ್ ರೊಡ್ರಿಗಸ್ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದರು.

Ad Widget

3 ದಿನಗಳ ಹಿಂದೆಯಷ್ಟೆ ಇವರಿಗೆ ಉದ್ಯೋಗ ದೊರಕಿದ್ದು, ಕೆಲಸದಿಂದ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಬರುವಾಗ ಅಪಘಾತವಾಗಿ ಡಿವೈಡರ್ ಗೆ ತಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *