Ad Widget .

ಬೆಂಗಳೂರಿನಲ್ಲಿ ಬಂದಿಳಿದ ವಿಶ್ವದ ಅತಿ‌ದೊಡ್ಡ ವಿಮಾನ| ಇದರ ವಿಶೇಷತೆಗಳೇನು ಗೊತ್ತಾ?

ಸಮಗ್ರ ನ್ಯೂಸ್: ವಿಶ್ವದ ಅತಿದೊಡ್ಡ ವಿಮಾನವನ್ನು ನೀವು ಯಾವತ್ತೂ ನೋಡಿರಲು ಸಾಧ್ಯವಿಲ್ಲ ಆದರೆ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ನಿನ್ನೆ (ಅ.14) ಸಾಕ್ಷಿಯಾಗಿದೆ.

Ad Widget . Ad Widget .

ಏರ್‌ಬಸ್ A380, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿಗದಿತ ಸಮಯಕ್ಕಿಂತ ಎರಡು ವಾರಗಳ ಮುಂಚಿತವಾಗಿ ಬಂದಿಳಿದಿದೆ. ಎಮಿರೇಟ್ಸ್ ಏರ್‌ಲೈನ್ಸ್​ನ ಡಬಲ್ ಡೆಕ್ಕರ್ ವಿಮಾನ ದುಬೈನಿಂದ ಕರ್ನಾಟಕದ ರಾಜಧಾನಿಗೆ ಬಂದಿದೆ. ಎಮಿರೇಟ್ಸ್ ‌ವಿಮಾನಯಾನ ಕಂಪನಿಯ ದೊಡ್ಡ ವಿಮಾನ ಇದಾಗಿದ್ದು, 500ಕ್ಕೂ ಹೆಚ್ಚು ಸೀಟ್​ಗಳು ಸೇರಿ, ಹಲವು‌ ವಿಶೇಷತೆಗಳನ್ನು ಹೊಂದಿದೆ.

Ad Widget . Ad Widget .

ಎಮಿರೇಟ್ಸ್‌ನ ಇಕೆ 562 ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಶುಕ್ರವಾರ ಮಧ್ಯಾಹ್ನ 3:40 ರ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣ ಪ್ರವೇಶಿಸಿತ್ತು. ನಂತರ ಸಂಜೆ ಬೆಂಗಳೂರಿನಿಂದ ದುಬೈಗೆ ಹಿಂತಿರುಗಿದೆ. ಬೆಂಗಳೂರಿನಿಂದ ಐಕಾನಿಕ್ ವಿಮಾನವನ್ನು ಹತ್ತುವ ಪ್ರಯಾಣಿಕರಿಗೆ ಇದು ಮೊದಲ ಐಷಾರಾಮಿ ಹಾರಾಟದ ಅನುಭವವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

Leave a Comment

Your email address will not be published. Required fields are marked *