Ad Widget .

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಬೆದರಿಕೆ ಒಡ್ಡಿದ ಆರೋಪಿ ಅರೆಸ್ಟ್

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾರವರ ಮೇಲೆ ನಡೆದಿದೆ ಎನ್ನಲಾದ ತಲವಾರ್‌ ದಾಳಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ ಆತನ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲದಿರುವುದು ವಿಶೇಷವಾಗಿದೆ.

Ad Widget . Ad Widget .

ಮಂಗಳೂರು ಪಳ್ನೀರ್‌ ನಿವಾಸಿ ಅಬ್ದುಲ್‌ ಖಾದರ್‌ ಎಂಬವರ ಪುತ್ರ ರಿಯಾಝ್‌ (38) ಬಂಧಿತ ಆರೋಪಿ. ಈತನಿಗೆ ಯಾವುದೇ ಪೂರ್ವ ಕ್ರಿಮಿನಲ್‌ ಹಿನ್ನಲೆ ಇಲ್ಲ .ಈ ಪ್ರಕರಣ ಹೊರತು ಪಡಿಸಿ ಈತನ ವಿರುದ್ದ ಇವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ದಕ್ಷಿಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.

Ad Widget . Ad Widget .

ರಸ್ತೆಯಲ್ಲಿ ಓವರ್‌ ಟೆಕ್‌ ಮಾಡುವ ವಿಚಾರದಲ್ಲಿ ಉಂಟಾದ ಕಿರಿಕ್‌ ಸಂಘರ್ಷಕ್ಕೆ ಕಾರಣವಾಗಿದೆ. ತನ್ನ ವಾಹನವನ್ನು ಮುಂದೆ ಹೋಗಲು ಬಿಟ್ಟಿಲ್ಲ ಎಂಬ ಭಾವನೆ ಆರೋಪಿಯ ಮನಸ್ಸಿನಲ್ಲಿ ಉಂಟಾದ ಕಾರಣ ಆತ ಶಾಸಕರ ಕಾರು ಚಾಲಕನ ಜತೆ ಜಗಳವಾಡಿದ್ದಾನೆ ಎನ್ನಲಾಗಿದೆ. ಶಾಸಕ ಹರೀಶ್‌ ಪೂಂಜಾರವರ ಕಾರು ಚಾಲಕ ಹಾಗೂ ಪ್ರಕರಣದ ದೂರುದಾರ ನವೀನ್‌ ಆರೋಪಿಯನ್ನು ಗುರುತಿಸಿದ್ದಾರೆ. ಘಟನೆ ನಡೆದ ವೇಳೆ ಆರೋಪಿ ಬಳಸುತ್ತಿದ್ದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *