Ad Widget .

ಮಧ್ಯರಾತ್ರಿಯೂ ನೀವು ಬಿಸಿಬಿಸಿ ಇಡ್ಲಿ ತಿನ್ಬಹುದು| ಹೊಸದಾಗಿ ಶುರುವಾಗಿದೆ 24×7 ಇಡ್ಲಿ ವೆಂಡಿಂಗ್ ಮೆಷಿನ್!!

ಸಮಗ್ರ ನ್ಯೂಸ್: ನಿಮಗೇನಾದರೂ ಮಧ್ಯರಾತ್ರಿ ಇಡ್ಲಿ ತಿನ್ನುವ ಆಸೆಯೇ ಇದೆಯೇ? ಇದೆ ಎಂದಾದರೆ ಸ್ಟಾರ್ಟಪ್‌ವೊಂದು ಬೆಂಗಳೂರಿನಲ್ಲಿ ಇಡ್ಲಿಯನ್ನು ಎಟಿಎಂನಂತೆ ತ್ವರಿತವಾಗಿ ಹಾಗೂ ತಾಜಾವಾಗಿ ತಯಾರಿಸಿ ಪ್ಯಾಕೇಜ್ ಮಾಡಿ ವಿತರಿಸಲು ಆರಂಭಿಸಲಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರನ್ ಅವರು ಸ್ಥಾಪಿಸಿದ ಸ್ಟಾರ್ಟ್‌ಅಪ್ ಫ್ರೆಶಾಟ್ ರೊಬೊಟಿಕ್ಸ್‌ನ ಉತ್ಪನ್ನವಾಗಿದೆ ಎಂದು ವರದಿಯೊಂದು ಹೇಳಿದೆ.

Ad Widget . Ad Widget . Ad Widget .

ಟ್ವಿಟ್ಟರ್‌ನಲ್ಲಿ ಈ ವೀಡಿಯೊ ವೈರಲ್‌ ಆಗಿದ್ದು, ಸಂಪೂರ್ಣ ಸ್ವಯಂಚಾಲಿತ ಮತ್ತು ಮಾನವ ಸಂಪರ್ಕರಹಿತ ಪ್ರಕ್ರಿಯೆಯ ಮೂಲಕ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮತ್ತು ಹಬೆಯಾಡುವ ಇಡ್ಲಿಗಳನ್ನು ನಿಮಿಷಗಳಲ್ಲಿ ವಿತರಿಸಲಾಗುತ್ತದೆ ಎಂದು ವೀಡಿಯೊ ತೋರಿಸುತ್ತದೆ. ಈ ಯಂತ್ರವನ್ನು ಸ್ಥಾಪಿಸುವ ಕಲ್ಪನೆಯು ವೈಯಕ್ತಿಕ ಅನುಭವದಿಂದ ಬಂದಿದೆ. 2016ರಲ್ಲಿ ಶರಣ್ ಹಿರೇಮಠ್ ಅವರು ತಡರಾತ್ರಿಯಲ್ಲಿ ತಮ್ಮ ಮಗಳಿಗೆ ಇಡ್ಲಿಗಳನ್ನು ಖರೀದಿಸಲು ಬಯಸಿದ್ದರು. ಆದರೆ ಯಾವುದೇ ರೆಸ್ಟೋರೆಂಟ್‌ಗಳು ತೆರೆದಿರಲಿಲ್ಲ.

ಮತ್ತೊಂದು ಘಟನೆಯಲ್ಲಿ ಹಿರೇಮಠ್ ಮತ್ತು ಚಂದ್ರಶೇಖರನ್ ಅವರಿಗೆ ಕಲ್ಲಿನಂತ ಹಾಗೂ ಹಳಸಿದ ಇಡ್ಲಿಗಳನ್ನು ಅವರ ಪ್ರವಾಸಗಳಲ್ಲಿ ಬಡಿಸಲಾಗಿತ್ತು. ಆದರೆ ಎಲ್ಲಿ ಯಾರು ಎಂದು ವರದಿಯಲ್ಲಿ ಹೇಳಿಲ್ಲ.

ಮೆಷಿನ್‌ ಸಿದ್ಧಪಡಿಸಿದ ಅವರು ತಮ್ಮ ಫುಡ್‌ಬಾಟ್ ದಕ್ಷಿಣ ಭಾರತದ ಭಕ್ಷ್ಯಗಳನ್ನು ಪೂರೈಸುವ ಮೊದಲ ಸಂಪೂರ್ಣ ಸ್ವಯಂಚಾಲಿತ ಅಡುಗೆ ಮತ್ತು ಮಾರಾಟವಾಗಿದೆ ಎಂದು ಹೇಳಿದ್ದಾರೆ. ಅವರು ಬೆಂಗಳೂರಿನ ಎರಡು ಸ್ಥಳಗಳಲ್ಲಿ ತಮ್ಮ ಅಸ್ತಿತ್ವವನ್ನು ಹೊಂದಿದ್ದು, ಇತರ ಕಚೇರಿಗಳು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿಯೂ ಯಂತ್ರಗಳನ್ನು ಸ್ಥಾಪಿಸಲು ಯೋಜಿಸಿದ್ದಾರೆ.

ಅವರು ಇಡ್ಲಿ ತಯಾರಿಕೆ ಮಾತ್ರ ಸೀಮಿತವಾಗಿರಲು ಬಯಸದೆ ಡೋಸಾಬಾಟ್‌ಗಳು, ರೈಸ್‌ ಬಾಟ್‌ಗಳು ಮತ್ತು ಜ್ಯೂಸ್‌ ಬಾಟ್‌ಗಳು ಸಹ ಪರಿಚಯಿಸುವ ಯೋಜನೆಯನ್ನು ಹೊಂದಿದ್ದಾರೆ.

Leave a Comment

Your email address will not be published. Required fields are marked *