Ad Widget .

ಚಿಕ್ಕಮಗಳೂರಿನಲ್ಲೊಂದು ಅಮಾನವೀಯ ಕೃತ್ಯ| ಕಾಫಿ ಎಸ್ಟೇಟ್ ಮಾಲೀಕನಿಂದ ದಲಿತ ಸಮುದಾಯದ‌ ಮೇಲೆ ಹಲ್ಲೆ| ಗರ್ಭಿಣಿ ಮಹಿಳೆಗೆ ಥಳಿತ; ಹಲ್ಲೆಗೊಳಗಾದಾಕೆಗೆ ಗರ್ಭಪಾತ!!

ಸಮಗ್ರ ನ್ಯೂಸ್: ಕಾಫಿ ಎಸ್ಟೇಟ್ ಮಾಲಕನಿಂದ ಹಲ್ಲೆಗೊಳಗಾಗಿ ದಲಿತ ಸಮುದಾಯದ ಕಾರ್ಮಿಕರು ಕೋಣೆಯಲ್ಲಿ ಬಂಧಿಯಾಗಿದ್ದ ಪ್ರಕರಣದಲ್ಲಿ ಗರ್ಭಿಣಿಯ ಹೊಟ್ಟೆಗೆ ಏಟು ಬಿದ್ದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ವೈದ್ಯರು ಮಹಿಳೆಗೆ ಗರ್ಭಪಾತ ಮಾಡಿರುವ ಘಟನೆ ಚಿಕ್ಕಮಗಳೂರಿನಿಂದ ಮಂಗಳವಾರ ವರದಿಯಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಗದೀಶ್ ಗೌಡ ಎಂಬಾತ ಹಲ್ಲೆ ನಡೆಸಿದ ಕಾಫಿ ಎಸ್ಟೇಟ್ ಮಾಲಕ. ಈತನ ಎಸ್ಟೇಟ್‌ನಲ್ಲಿ ದಲಿತ ಸಮುದಾಯದ ಮೂರು ಕಾರ್ಮಿಕ ಕುಟುಂಬಗಳು ಕೆಲಸಕ್ಕೆ ತೆರಳಿದ್ದರು. ಈ ವೇಳೆ ಜಗದೀಶ್‌ಗೌಡ ಹಾಗೂ ಕಾರ್ಮಿಕ ಕುಟುಂಬಸ್ಥರ ನಡುವೆ ಮಕ್ಕಳ ವಿಚಾರಕ್ಕೆ ಜಗಳ ನಡೆದಿತ್ತು. ಈ ಸಂದರ್ಭ ಎಸ್ಟೇಟ್ ಮಾಲಕ ಅರ್ಪಿತಾ ಎಂಬ ಗರ್ಭಿಣಿಯ ಪತಿ ವಿಜಯ್ ಎಂಬವರ ಸಂಬಂಧಿಕನಿಗೆ ಹಲ್ಲೆ ಮಾಡಿದ್ದು, ಇದರಿಂದ ಬೇಸರಗೊಂಡ ಕಾರ್ಮಿಕ ಕುಟುಂಬಗಳು ಎಸ್ಟೇಟ್ ತೊರೆಯಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಜಗದೀಶ್ ಗೌಡ ಕಾರ್ಮಿಕರಿಗೆ ನೀಡಿದ್ದ ಮುಂಗಡ ಹಣವನ್ನು ಹಿಂದಿರುಗಿಸುವಂತೆ ಪಟ್ಟು ಹಿಡಿದಿದ್ದ ಎನ್ನಲಾಗಿದೆ.

Ad Widget . Ad Widget . Ad Widget .

ಹಣ ಹಿಂದಿರುಗಿಸುವ ಸಲುವಾಗಿ ಅರ್ಪಿತಾ ಪತಿಯ ಸಂಬಂಧಿಗಳಾದ ಮಂಜು, ಸತೀಶ್ ಎಂಬವರು ಹಣ ಹೊಂದಿಸಿಕೊಂಡು ಬರಲು ಎಸ್ಟೇಟ್‌ನಿಂದ ಹೊರ ಬಂದಿದ್ದರು. ಈ ಮಧ್ಯೆ ಕಳೆದ ಅ.8ರಂದು ಎಸ್ಟೇಟ್ ಮಾಲಕ ಜಗದೀಶ್, ಹಣ ತರಲು ಹೋದವರು ಇನ್ನೂ ಬಂದಿಲ್ಲ ಎಂದು ಆಕ್ರೋಶಗೊಂಡು ಮನಬಂದಂತೆ ನಿಂದಿಸಿದ್ದ. ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಅರ್ಪಿತಾಳನ್ನು ಕಂಡು ಮತ್ತಷ್ಟು ಕುಪಿತನಾದ ಜಗದೀಶ್‌ಗೌಡ ಗರ್ಭಿಣಿಯ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ್ದಲ್ಲದೆ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದ. ಈ ವೇಳೆ ಗರ್ಭಿಣಿ ಮಹಿಳೆಯ ಹೊಟ್ಟೆ ಗೋಡೆಗೆ ತಾಗಿ ತೀವ್ರ ಪೆಟ್ಟಾಗಿತ್ತು. ಆದರೂ ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿ ವಿಜಯ ಸೇರಿದಂತೆ ಮಕ್ಕಳು, ಮಹಿಳೆಯರು, ವೃದ್ಧರಿದ್ದ ಸುಮಾರು 14 ಮಂದಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿದೆ.

ಹೊಟ್ಟೆ ನೋವು ಜೋರಾದ ಪರಿಣಾಮ ಎಸ್ಟೇಟ್ ಮಾಲಕ ತನ್ನ ಜೀಪಿನಲ್ಲಿ ಮಹಿಳೆಯನ್ನು ಕಡಬಗೆರೆ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿನ ವೈದ್ಯರು ಮೂಡಿಗೆರೆ ಕಳುಹಿಸಿದ್ದಾರೆ. ಮೂಡಿಗೆರೆ ವೈದ್ಯರು ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದು, ಈ ವೇಳೆ ವೈದ್ಯರು ಗರ್ಭಿಣಿಯ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವ ಆಗಿದೆ ಎಂದು ಹೇಳಿ ಗರ್ಭಪಾತ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಭಟನೆಯ ಎಚ್ಚರಿಕೆ:
ಕೂಲಿ ಕಾರ್ಮಿಕರನ್ನು ಕೋಣೆಯಲ್ಲಿ ಕೂಡಿ ಹಾಕಿದ್ದ ಪ್ರಕರಣ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಎಸ್ಟೇಟ್ ಮಾಲಕ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ, ಆರೋಪಿಗಳ ಸುಳಿವು ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವುದರಿಂದ ಪ್ರಭಾವಿಗಳ ಒತ್ತಡದಿಂದಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪೊಲೀಸರು ಆರೋಪಿಗಳನ್ನು ಬುಧವಾರ ಸಂಜೆಯೊಳಗೆ ಬಂಧಿಸಬೇಕು. ತಪ್ಪಿದ್ದಲ್ಲಿ ಗುರುವಾರ ‘ಬಾಳೆಹೊನ್ನೂರು ಚಲೋ’ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸಾಮಾಜಿಕ ಕಾರ್ಯಕರ್ತ ಕೌಳಿರಾಮು ಎಚ್ಚರಿಸಿದ್ದಾರೆ.

ಅಂಬೇಡ್ಕರ್ ರಕ್ಷಣಾ ವೇದಿಕೆಯ ದ.ಕ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಹೇಳಿಕೆ ನೀಡಿದ್ದು, ಹಲ್ಲೆ ನಡೆಸಿದಾತ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ‌ನೀಡಿದ್ದಾರೆ. ಎಸ್ಟೇಟ್ ಮಾಲೀಕನ ಮತ್ತು ಅವರ ಪುತ್ರನನ್ನು ಕೂಡಲೇ ಬಂಧಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬಾಳೆಹೊನ್ನೂರು ಪೋಲಿಸ್ ಠಾಣೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಮಾಧ್ಯಮದಲ್ಲಿ ಎಚ್ಚರಿಕೆ ನೀಡಿದ್ದಾರೆ

Leave a Comment

Your email address will not be published. Required fields are marked *