Ad Widget .

ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ್​ ಸಿಂಹರ ಕೊಡುಗೆ ಶೂನ್ಯ – ತನ್ವೀರ್ ಸೇಠ್

ಸಮಗ್ರ ನ್ಯೂಸ್: ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ ಸಿಂಹರ ಕೊಡುಗೆ ಶೂನ್ಯ, ಇತಿಹಾಸ ತಿಳಿದು ಮಾತನಾಡಲಿ‌ ಎಂದು ಶಾಸಕ ತನ್ವೀರ್ ಸೇಠ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು.

Ad Widget . Ad Widget .

ಟಿಪ್ಪು ಎಕ್ಸ್​ಪ್ರೆಸ್​ ಹೆಸರನ್ನು ಒಡೆಯರ್ ಎಕ್ಸ್​ಪ್ರೆಸ್ ಎಂದು ನಾನು ಉದ್ದೇಶ ಪೂರ್ವಕವಾಗಿಯೇ ಬದಲಾಯಿಸಿದ್ದೇನೆ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಠ್, ಯಾರು ಕೊಡುಗೆ ಏನಿದೆ ಅಂತ ನಾನು ಚರ್ಚೆಗೆ ಹೋಗಲ್ಲ. ಟಿಪ್ಪು ಸುಲ್ತಾನ್ ಮೈಸೂರು ಸಾಮ್ರಾಜ್ಯಕ್ಕೆ ರಕ್ಷಣೆ ಕೊಟ್ಟಿದ್ದಾರೆ ಎಂಬ ಕೀರ್ತಿ ಇದೆ. ಮಹಾರಾಜರ ನಿಧನದ ನಂತರ 18 ವರ್ಷಗಳ ಕಾಲ ದಸರಾ ನಡೆಸಿರುವ ಇತಿಹಾಸ ಇದೆ ಎಂದು ಹೇಳಿದರು.

Ad Widget . Ad Widget .

ಸಮುದಾಯಗಳ ಮಧ್ಯದಲ್ಲಿ ಒಡಕು ಮೂಡುವ ಕೆಲಸ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರಕ್ಕೆ ಉತ್ತರ ನೀಡುವುದಿಲ್ಲ, ಕಾಲವೇ ಉತ್ತರ ಕೊಡುತ್ತೆ. ಅವಕಾಶವನ್ನು ಉಪಯೋಗ ಮಾಡಿಕೊಳ್ಳುತ್ತಾರೆ. ಇಲ್ಲ ದುರುಪಯೋಗ ಮಾಡಿಕೊಳ್ತಾರೋ? ಕಾಲವೇ ಉತ್ತರ ಕೊಡುತ್ತೆ ಎಂದು ತಿಳಿಸಿದರು.

ವರದಿ: ಮಹಾದೇವ್, ಸಮಗ್ರ ನ್ಯೂಸ್ ಮೈಸೂರು

Leave a Comment

Your email address will not be published. Required fields are marked *