Ad Widget .

ಹೆಂಡತಿಯ ಬಿಟ್ಟು ಪ್ರೇಯಸಿ ಜೊತೆ ಪ್ರವಾಸ ಹೋದ ಗಂಡ| ನೊಂದ ಪತ್ನಿ ನೇಣಿಗೆ ಶರಣು|

ಸಮಗ್ರ ನ್ಯೂಸ್: ಅವರು ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರ ತಂದೆ ತಾಯಿ ಅದ್ದೂರಿ ಮದುವೆ ಮಾಡಿದ್ದರು. ಮದುವೆಯಾಗಿ ಕೇವಲ 8 ತಿಂಗಳು ಆಗಿತ್ತು. ಕೈಹಿಡಿದ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಆತ ಪ್ರೇಯಸಿಯ ಜೊತೆ ಸುತ್ತಾಡ್ತಿದ್ದ, ಸಾಲದು ಎಂಬಂತೆ ಪ್ರೇಯಸಿ ಜೊತೆ ಸುತ್ತಾಡ್ತಿರುವ ಹಾಗೂ ಮೋಜು ಮಸ್ತಿ ಮಾಡ್ತಿರುವ ಫೋಟೊಗಳನ್ನು, ತನ್ನ ಪತ್ನಿಗೆ ಕಳುಹಿಸಿದ್ದ. ಇದರಿಂದ ಮನನೊಂದ ಆಕೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ 20 ವರ್ಷದ ಮೋನಿಕಾ ಹಾಗೂ ಚಿಕ್ಕಬಳ್ಳಾಪುರ ನಗರ ಪ್ರಶಾಂತ್ ನಗರ ನಿವಾಸಿ 25 ವರ್ಷದ ಭಾರ್ಗವ್, ಕೇವಲ 8 ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾಗಿ ಸುಖ ಸಂಸಾರದಲ್ಲಿ ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಇತ್ತಂತೆ. ಇದ್ರಿಂದ ಮೋನಿಕಾ ಗಂಡ ಭಾರ್ಗವ, ವಿಜಯದಶಮಿ ಹಬ್ಬದ ಪ್ರಯುಕ್ತ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ. ಅದಾದಮೇಲೆ ವಾಪಸ್ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿಲ್ಲ. ಇದ್ರಿಂದ ಅನುಮಾನಗೊಂಡ ಪತ್ನಿ, ಕರೆದುಕೊಂಡು ಹೋಗಲು ಹೇಳಿದಾಗ ಬೇರೆಯದ್ದೆ ಕತೆ ಹೇಳಿದ್ದ.

Ad Widget . Ad Widget .

ಬುಧವಾರ(ಆ.12) ಗಂಡ ಬರುವುದರ ಬದಲು ಆತನು ಕಳುಹಿಸಿದ್ದ ಕೆಲವು ಫೊಟೊಗಳು ಮೋನಿಕಾ ವಾಟ್ಸಪ್ ಗೆ ಬಂದಿದ್ದವು! ಅದನ್ನು ನೋಡಿ ದಂಗಾದ ಮೋನಿಕ ತವರು ಮನೆಯಲ್ಲೆ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾಳೆ. ಗಂಡ ಭಾರ್ಗವ ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗುವುದರ ಬದಲು ತಾನು ಬೇರೆ ಯುವತಿಯನ್ನು ಪ್ರೀತಿ ಮಾಡ್ತಿದ್ದೀನಿ, ಆಕೆಯೂ ತನ್ನನ್ನು ಪ್ರೀತಿ ಮಾಡ್ತಿದ್ದಾಳೆ, ಇಬ್ಬರೂ ಸೇರಿ ಪ್ರವಾಸದಲ್ಲಿ ಇದ್ದೇವೆ ಅಂತ ಹೇಳಿದ್ದ. ಜೊತೆಗೆ, ಲವ್ವರ್ ಜೊತೆ ಇರುವ ಕೆಲವು ಪೋಟೊಗಳನ್ನು ವಾಟ್ಸಪ್ ಗೆ ಪೋಸ್ಟ್ ಮಾಡಿದ್ದಾನಂತೆ.

ಇದರಿಂದ ಮನನೊಂದ ಮೋನಿಕಾ, ತನ್ನ ಸಾವಿಗೆ ತನ್ನ ಗಂಡ ಭಾರ್ಗವನೇ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟು, ತಂದೆಯ ಮನೆ ಮೇಲೆ ಇರುವ ಕೊಠಡಿಯಲ್ಲೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *