ಸಕಲೇಶಪುರ : ನಗರದೊಳಗೆ ಗಜರಾಜನ ಪಟ್ಟಣ ಸವಾರಿ; ಆತಂಕದಲ್ಲಿ ಜನತೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಸದಾಶಿವ ನಗರದಲ್ಲಿ ಕಾಡಾನೆಯೊಂದು ಓಡಾಟ ನಡೆಸಿರುವ ಘಟನೆ ಇಂದು ನಡೆದಿದೆ.

Ad Widget ... ..

ಅ. ೧೨ರ ರಾತ್ರಿ 8:45 ರಲ್ಲಿ ಕಾಡಾನೆಯು ರಾಜಾರೋಷವಾಗಿ ರಸ್ತೆಯಲ್ಲಿ ತಿರುಗಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಓಡಾಡಲು ಆತಂಕಪಡುತ್ತಿದ್ದಾರೆ.

Ad Widget

ಸಕಲೇಶಪುರ ಪಟ್ಟಣದಲ್ಲಿ ಇತ್ತೀಚಿಗೆ ಗೌಡಳ್ಳಿ ಮಳಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಬೆಳೆ ಹಾನಿ ಜೊತೆಗೆ ಸಾರ್ವಜನಿಕರು ನಿರ್ಭೀತಿಯಿಂದ ತಿರುಗಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಸಾರ್ವಜನಿಕ ಒತ್ತಾಯಿಸಿದ್ದಾರೆ.

Leave a Comment

Your email address will not be published. Required fields are marked *