Ad Widget .

ಸುಳ್ಯ- ಮಡಿಕೇರಿ ಗಡಿಭಾಗದಲ್ಲಿ ಅಕ್ರಮ ಮರಳು ದಂಧೆ! | ಗೊತ್ತಿದ್ದೂ ನಿದ್ದೆಗೆ ಜಾರಿದರಾ ಅಧಿಕಾರಿಗಳು!

ಸಮಗ್ರ ನ್ಯೂಸ್: ನದಿಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಸ್ಪಷ್ಟ ಆದೇಶ ನೀಡಿದ್ದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುದೆ. ದ.ಕ ಜಿಲ್ಲೆಯ ಗಡಿಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗೆ ಸ್ಥಳೀಯ ಜನಪ್ರತಿನಿಧಿಗಳ ಕೃಪೆಯಿದ್ದು ಪೊಲೀಸ್ ಅಧಿಕಾರಿಗಳಿಂದ ಹಿಡಿದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳವರೆಗೆ ಎಲ್ಲರೂ ಕೈ ಬಿಸಿ ಮಾಡಿಕೊಳ್ಳುತ್ತಿದ್ದು ಸಂಜೆಯಾಗುತ್ತಿದ್ದಂತೆ ನೂರಾರು ಲೋಡ್ ಮರಳು ಸಾಗಾಟವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Ad Widget . Ad Widget .

ಸುಳ್ಯ ತಾಲೂಕಿನ ಅರಂತೋಡು, ಕಡಬ ತಾಲೂಕಿನ ಸುಬ್ರಹ್ಮಣ್ಯ ‌ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಪಯಸ್ವಿನಿ ಹಾಗೂ ಕುಮಾರಧಾರಾ ನದಿಗಳ ಒಡಲಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ‌ ಸಾಗುತ್ತಿದ್ದು, ಅಕ್ರಮ ಮರಳು ದಾಸ್ತಾನು ಇರಿಸಲಾಗಿದ್ದರೂ ಗಣಿ ಇಲಾಖೆ ಅಧಿಕಾರಿಗಳು ದಿವ್ಯಮೌನ ವಹಿಸಿದ್ದಾರೆ. ದಂಧೆಯ ವಾಸನೆ ಮೂಗಿಗೆ ಬಡಿಯುತ್ತಿದ್ದರೂ ದಾಳಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ದಂಧೆಗೆ ಇದೆಯಾ ಪುತ್ತೂರು ಶಾಸಕರ ಕೃಪೆ!?
ಅರಂತೋಡು, ಅಜ್ಜಾವರ, ಮರ್ಕಂಜ, ಸಂಪಾಜೆ, ಸುಬ್ರಹ್ಮಣ್ಯದಲ್ಲಿ ನಡೀತಾ ಇರೋ ಮರಳು ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು ಪುತ್ತೂರು ಶಾಸಕ ಮಠಂದೂರುರವರ ಆಪ್ತರೆನ್ನಲಾಗಿದ್ದು, ಅವರ ಜೊತೆಯಲ್ಲೇ ಓಡಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಹತ್ತಾರು ಹೊಸ ಟಿಪ್ಪರ್ ಗಳನ್ನು ಮರಳು ಸಾಗಾಟಕ್ಕೆ ಬಳಸುತ್ತಿದ್ದು ಅಕ್ರಮ ಸಾಗಾಟದ ಬಗ್ಗೆ ಪ್ರಶ್ನೆ ಮಾಡಿದರೆ ಶಾಸಕರ ಹೆಸರು ಹೇಳಿ ಬಾಯಿ ಮುಚ್ಚಿಸುತ್ತಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಸರಕಾರಕ್ಕೆ ರಾಜಧನ ವಂಚಿಸಿ ನಡೀತಿರೋ ದಂಧೆ ಇಷ್ಟು ಚಿಗಿತುಕೊಳ್ಳಲು ಕಾರಣ ಯಾರು ಎನ್ನುವುದು ಸ್ಥಳೀಯರ ಪ್ರಶ್ನೆ. ಪಯಸ್ವಿನಿ ನದಿಯಲ್ಲಿ ನಿರಂತರ ಮರಳು ದಂಧೆಯಿಂದ ಪ್ರಾಕೃತಿಕ ಸಮತೋಲನ ತಪ್ಪಿಹೋಗಿ ಮುಂದೊಂದು ದಿನ ಈ ಭಾಗದಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿದರೆ ಅಚ್ಚರಿ ಪಡಬೇಕಿಲ್ಲ. ಹಾಗಾಗುವ ಮುನ್ನ ಜಿಲ್ಲಾಡಳಿತ, ಗಣಿ ಇಲಾಖೆ, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ದಂಧೆಗೆ ಶಾಶ್ವತ ಬ್ರೇಕ್ ಹಾಕಬೇಕಿದೆ.

ಹಸಿರು ಪೀಠದ ಆದೇಶಕ್ಕೆ ಡೋಂಟ್ ಕೇರ್!
ಜಲಕಾಯಗಳು, ಕೆರೆಗಳು, ಕೊಳಗಳು ಹಾಗೂ ಚೌಗು ಪ್ರದೇಶಗಳಲ್ಲಿ ಹೂಳೆತ್ತುವ ನೆಪದಲ್ಲಿ ಮರಳು ಗಣಿಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ಪೀಠ ಆದೇಶಿಸಿದೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಸುಸ್ಥಿರ ಮರಳುಗಾರಿಕೆ ನಿರ್ವಹಣೆ ಮಾರ್ಗಸೂಚಿ 2016, ಮರಳು ಗಣಿಗಾರಿಕೆಯ ಮೇಲ್ವಿಚಾರಣೆ
ಹಾಗೂ ಜಾರಿ ಮಾರ್ಗಸೂಚಿ 2020 ಹೊರಡಿಸಿರುವ ಹಾಗೂ ಎನ್‌ಜಿಟಿಯ ಪ್ರಧಾನ ಪೀಠ ಮಾರ್ಗಸೂಚಿಯ ಪ್ರಕಾರವೇ ಹೂಳೆತ್ತುವ ಕಾಮಗಾರಿ-
ಗಳನ್ನು ನಡೆಸಬೇಕು ಎಂದು ಪೀಠ ನಿರ್ದೇಶನ ನೀಡಿದೆ. ಮರಳು ಗಣಿಗಾರಿಕೆಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪ್ರತಿ ಜಿಲ್ಲೆಯಲ್ಲಿ ಕಾರ್ಯಪಡೆಯನ್ನು ಸ್ಥಾಪಿಸಬೇಕು. ಉಲ್ಲಂಘನೆಯ
ಪ್ರಕರಣಗಳು ಕಂಡು ಬಂದಾಗ ಗಣಿನಿಯಮಗಳ ಅಡಿಯಲ್ಲಿ ದಂಡ ವಿಧಿಸುವ ಹಾಗೂ ಪರಿಸರ ಪರಿಹಾರಗಳನ್ನು ವಸೂಲಿ ಮಾಡುವಂತಹ
ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಸೂಚಿಸಿದೆ.

ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಪ್ರತಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ, ಹೂಳೆತ್ತುವ ಕಾಮಗಾರಿಗಳು, ಚೌಗು ಪ್ರದೇಶಗಳ ಮೇಲೆ ನಿಗಾ ಇಡಬೇಕು. ಒಂದು ವೇಳೆ ಉಲ್ಲಂಘನೆ ಪ್ರಕರಣಗಳು
ಕಂಡುಬಂದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

*ಸಮಗ್ರ ನ್ಯೂಸ್ ಮಂಗಳೂರು

Leave a Comment

Your email address will not be published. Required fields are marked *