Ad Widget .

ಸುಳ್ಯ: ಪೈಟಿಂಗ್ ಮಾಡುತ್ತಿದ್ದ ಕಾರ್ಮಿಕ ಆಯತಪ್ಪಿ ಬಿದ್ದು ಸಾವು

ಸಮಗ್ರ ನ್ಯೂಸ್: ಕಟ್ಟಡವೊಂದಕ್ಕೆ ಪೈಂಟಿಂಗ್ ಮಾಡುತ್ತಿದ್ದಾಗ ಮೇಲಿನಿಂದ ಬಿದ್ದು ಬಿಹಾರ ಮೂಲದ ಯುವಕ ಮೃತಪಟ್ಟ ಘಟನೆ ದ.ಕ ಜಿಲ್ಲೆಯ ಸುಳ್ಯ ನಗರದ ಕುರುಂಜಿಭಾಗ್ ನಿಂದ ವರದಿಯಾಗಿದೆ.

Ad Widget . Ad Widget .

ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಹಿಂಬದಿಯ ಕಟ್ಟಡದಲ್ಲಿ ಬಿಹಾರ ಮೂಲದ ರಂಜಿತ್ (29) ಪೈಂಟ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಮೇಲಿನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದರು.‌ ಗಂಭೀರ ಗಾಯಗೊಂಡಿದ್ದ ಆತನನ್ನು ಜತೆಗಾರರು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು‌ ಮೃತ ಪಟ್ಟರೆಂದು ತಿಳಿದು ಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *