Ad Widget .

ಪಣಜಿ ಸಮುದ್ರದಲ್ಲಿ ಪತನಗೊಂಡ MiG29K ಯುದ್ದ ವಿಮಾನ|

ಸಮಗ್ರ ನ್ಯೂಸ್: MiG 29K ಯುದ್ಧ ವಿಮಾನವು ಗೋವಾ ಕರಾವಳಿಯ ಪಣಜಿ ಸಮುದ್ರದ ಮೇಲೆ ಪತನಗೊಂಡಿದೆ ಎಂದು ವರದಿಯಾಗಿದೆ.

Ad Widget . Ad Widget .

MiG 29K ವಿಮಾನವು ಅತ್ಯಾಧುನಿಕ, ವಾಯು ಪ್ರಾಬಲ್ಯದ ಫೈಟರ್ ಜೆಟ್ ಆಗಿದ್ದು, ಸುಮಾರು 2000 kmph ಗರಿಷ್ಠ ವೇಗವನ್ನು ಹೊಂದಿದೆ. ಇದು 65,000 ಅಡಿಗಿಂತಲೂ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ.

Ad Widget . Ad Widget .

ಇಂದು ಬೆಳಗ್ಗೆ ವಾಡಿಕೆ ವಿಹಾರ ನಡೆಸುತ್ತಿದ್ದಾಗ ಯುದ್ಧ ವಿಮಾನ ಬೇಸ್‌ಗೆ ಹಿಂತಿರುಗುವಾಗ ತಾಂತ್ರಿಕ ದೋಷ ಕಂಡುಬಂದು ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪೈಲಟ್ ಅವರನ್ನು ತ್ವರಿತವಾಗಿ ವಿಮಾನದಿಂದ ಹೊರತೆಗೆಯಲಾಗಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಪತನಕ್ಕೆ ಕಾರಣವನ್ನು ತಿಳಿಯಲು ತನಿಖಾ ಮಂಡಳಿಗೆ ತನಿಖೆಗೆ ಆದೇಶಿಸಲಾಗಿದೆ.

Leave a Comment

Your email address will not be published. Required fields are marked *