ಸಮಗ್ರ ನ್ಯೂಸ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್ ಮೂಲದ ನಿಸಾನ್ ಕಾರು ಕಂಪನಿ, ರಷ್ಯಾದ ತನ್ನ ಎಲ್ಲ ವಹಿವಾಟನ್ನು ಕೇವಲ 80 ರೂ.(1 ಯೂರೋ)ಗಳಿಗೆ ಮಾರಾಟ ಮಾಡಿದೆ. ಈ ಮೂಲಕ 56,485 ಕೋಟಿ ರೂ.(687 ದಶಲಕ್ಷ ಡಾಲರ್) ನಷ್ಟ ಮಾಡಿಕೊಂಡಿದೆ.
ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ಎನ್‌ಎಎಂಐ ಎಂಬ ಸಂಸ್ಥೆಗೆ ಇದನ್ನು ಮಾರಿದೆ ಎಂದು ರಷ್ಯಾದ ಉದ್ಯಮ ಮತ್ತು ವ್ಯಾಪಾರ ಸಚಿವಾಲಯ ಹೇಳಿದೆ. ಆದರೆ, ಮುಂದಿನ ಆರು ವರ್ಷಗಳಲ್ಲಿ ಯಾವಾಗ ಬೇಕಾದರೂ, ನಿಸಾನ್ ಮೋಟಾರ್ಸ್ ತನ್ನ ವಹಿವಾಟನ್ನು ವಾಪಸ್ ಪಡೆಯಬಹುದಾಗಿದೆ ಎಂದೂ ತಿಳಿಸಿದೆ.
ಉಕ್ರೇನ್ ಮೇಲಿನ ಯುದ್ಧದಿಂದಾಗಿ ಈಗಾಗಲೇ ಹಲವಾರು ಜಾಗತಿಕ ಕಂಪನಿಗಳು ರಷ್ಯಾ ಬಿಟ್ಟು ಹೋಗಿವೆ. ಈಗ ನಿಸಾನ್ ಕೂಡ ಅದೇ ಹಾದಿ ಹಿಡಿದಿದೆ.