ಒಂದೇ ಬಾತ್ ರೂಮನಲ್ಲಿ ಎರಡು ಕಮೋಡ್| ಉದ್ಘಾಟನೆಯಾದ್ರೂ ಉಪಯೋಗಿಸುವವರಿಲ್ಲ!!

ಸಮಗ್ರ ನ್ಯೂಸ್: ಬಾತ್‌ರೂಂನಲ್ಲಿ ಕಮೋಡ್ ಇರುವುದನ್ನು ಎಲ್ಲರೂ ನೋಡಿದ್ದೇವೆ ಆದರೆ ಒಂದೇ ಶೌಚಾಲಯದಲ್ಲಿ ಎರಡೆರಡು ಶೌಚಾಲಯ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ. ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮಕ್ಕೆ ಶ್ರೀಪೆರಂಬಂದೂರಿನಲ್ಲಿ ಹೊಸತಾಗಿ ನಿರ್ಮಿಸಲಾದ ಕಟ್ಟಡಲ್ಲಿ ಒಂದೇ ಬಾತ್‌ರೂಂನಲ್ಲಿ ಎರೆಡೆರಡು ಶೌಚಾಲಯ ಇದೆ.

Ad Widget ... ..

ಇತ್ತೀಚೆಗಷ್ಟೇ ಕಟ್ಟಡದ ಉದ್ಘಾಟನೆ ನೆರವೇರಿದ್ದು, ಎರಡು ಕಮೋಡ್‌ಗಳನ್ನು ಸ್ಥಾಪಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಟ್ಟಡದ ಯೋಜನಾಧಿಕಾರಿ ಸ್ಪಷ್ಟನೆ ನೀಡಿದ್ದು, ಇನ್ನೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಿಲ್ಲ. ಎರಡೂ ಶೌಚದ ಮಧ್ಯೆ ಗೋಡೆ ಕಟ್ಟಬೇಕಿದೆ ಎಂದಿದ್ದಾರೆ.

Ad Widget

ಈ ಚಿತ್ರವು ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮದ (SIPCOT) ಹೊಸ ಕಟ್ಟಡ ಆಗಿದೆ. 1.80 ಕೋಟಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗ್ತಿದೆ. ಶ್ರೀಪೆರಂಬದೂರಿನ ಈ ಹೊಸ ಕಟ್ಟಡದಲ್ಲಿ ಒಂದೇ ಬಾತ್‌ ರೂಂ ನಲ್ಲಿ ಎರಡು ಕಮೋಡ್‌ ಗಳನ್ನು ತಯಾರಿಸಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಕಟ್ಟಡದ ಬಗ್ಗೆ ಸಾಕಷ್ಟು ಜೋಕ್ ಗಳು ವೈರಲ್ ಆಗುತ್ತಿವೆ.

ಶ್ರೀಪೆರಂಬದೂರಿನ ಕಚೇರಿ ಕಟ್ಟಡದಲ್ಲಿ ಒಂದೇ ಸ್ನಾನಗೃಹದಲ್ಲಿ ಎರಡು ಕಮೋಡ್‌ ಗಳನ್ನು ತಯಾರಿಸಿದ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ನೂತನ ಕಟ್ಟಡವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಉದ್ಘಾಟಿಸಿದ್ದಾರೆ.

Leave a Comment

Your email address will not be published. Required fields are marked *