ಉತ್ತರಾಖಂಡ್: ಹೃದಯಾಘಾತಕ್ಕೆ ಕೊಡಗಿನ ಯೋಧ ಬಲಿ

ಸಮಗ್ರ ನ್ಯೂಸ್: ಕರ್ತವ್ಯದಲ್ಲಿದ್ದ ಕೊಡಗಿನ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉತ್ತರಾಖಂಡ್‌ನಲ್ಲಿ ನಡೆದಿದೆ.

Ad Widget ... ..

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಮಹೇಶ್ (46) ಮೃತ ಯೋಧ. ಜೂನಿಯರ್ ಕಮೀಷನ್ ಆಫೀಸರ್ (JCO) ಆಗಿ ಉತ್ತರಾಖಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಹೋಗಿದ್ದರು. ಮಹೇಶ್ ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ.

Ad Widget

ಕಳೆದ 22 ವರ್ಷದಿಂದ ಭಾರತೀಯ ಸೇನೆಯಲ್ಲಿ‌ ಸೇವೆ ಸಲ್ಲಿಸುತ್ತಿದ್ದ ಮಹೇಶ್, ಬೆಂಗಳೂರು ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ್, ಉತ್ತರಾಖಂಡ್ ಸೇರಿದಂತೆ ವಿವಿಧ ಭಾಗದಲ್ಲಿ‌ ಸೇವೆ ಸಲ್ಲಿಸಿದ್ದರು. ನಾಳೆ(ಅ.12) ಯೋಧನ ಪಾರ್ಥಿವ ಶರೀರ ಹುಟ್ಟೂರಿಗೆ ಬರಲಿದೆಯೆಂದು ಸ್ಥಳೀಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದು ಮೃತ ಯೋಧ ಮಹೇಶ್ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ.

Leave a Comment

Your email address will not be published. Required fields are marked *