ನಾಪತ್ತೆಯಾಗಿದ್ದ ತಾಯಿ, ಮೂವರು ಮಕ್ಕಳ ಶವ ಬಾವಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಬೆಳಗಾವಿ ಸಮೀಪ ಘೋರ ದುರಂತವೊಂದು ಸಂಭವಿಸಿದ್ದು, ಮೂವರು ಮಕ್ಕಳನ್ನು ಕೊಂದು ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Ad Widget ... ..

ಕಳೆದ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ ಹಾಗೂ ಮೂವರು ಮಕ್ಕಳ ಶವ ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದ ಬಿಳ್ಳೂರು ಗ್ರಾಮದ ಹೊರ ವಲಯ ತೋಟದ ಬಾವಿಯೊಂದರಲ್ಲಿ ಪತ್ತೆಯಾಗಿವೆ.

Ad Widget

ಸಂಗೀತಾ ತುಕಾರಾಮ ಮಾಳಿ (27), ಅಮೃತಾ (13), ಅಂಕಿತಾ (10) ಹಾಗೂ ಐಶ್ವರ್ಯ (7) ಮೃತಪಟ್ಟವರು. ಮೃತರು ಅಥಣಿ ಜತ್ತ ರಸ್ತೆಯ ಬಿಳ್ಳೂರು ಗ್ರಾಮದ ತೋಟದ ಮನೆಯಲ್ಲಿ ವಾಸವಿದ್ದರು. 3 ದಿನಗಳ ಹಿಂದೆ ತಾಯಿ ಮಕ್ಕಳು ಕಾಣೆಯಾಗಿದ್ದರು ಎಂದು ಪತಿ ತುಕಾರಾಮ ದೂರು ನೀಡಿದ್ದರು.

Leave a Comment

Your email address will not be published. Required fields are marked *