ಸಮಗ್ರ ನ್ಯೂಸ್: ಕುಡಿದವರನ್ನು ಮನೆಗೆ ತಲುಪಿಸುವುದು ಇನ್ಮುಂದೆ ಬಾರ್ ಮಾಲೀಕರ ಜವಾಬ್ಧಾರಿ ಎಂದು ಗೋವಾ ಸಚಿವ ಮೌವಿನ್ ಗೋಡಿನ್ಹೊ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕಾನೂನಾತ್ಮಕ ನಿಬಂಧನೆಗಳನ್ನು ಪರಿಶೀಲಿಸಲು ಮತ್ತು ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಅವರ ಜೊತೆಗೆ ಚರ್ಚಿಸುವುದಾಗಿ ಸಚಿವ ಗೋಡಿನ್ಹೊ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಕುರಿತು ಗೋವಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಗೋವಾ ಒಂದು ಪ್ರವಾಸಿ ತಾಣವಾಗಿರುವ ಕಾರಣ, ದೇಶ ವಿದೇಶಗಳಿಂದಲೂ ಪ್ರವಾಸಕ್ಕಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಗೋವಾದಲ್ಲಿ ಹೆಚ್ಚಿನ ಪ್ರವಾಸಿಗರು ಆಲ್ಕೋಹಾಲ್ ಕಡಿಮೆ ಬೆಲೆಗೆ ಸಿಗುವ ಕಾರಣ ಕುಡಿದು ಗಾಡಿ ಓಡಿಸುತ್ತಾರೆ. ಇದರಿಂದ ಗೋವಾ ರಾಜ್ಯದಲ್ಲಿ ಅನೇಕ ರಸ್ತೆ ಅಪಘಾತಗಳು ಸಂಭವಿಸುತ್ತಿದೆ.
ಕುಡಿದು ವಾಹನ ಓಡಿಸುವವರ ವಿರುದ್ಧ ಗೋವಾ ರಾಜ್ಯದಲ್ಲಿ ಕಠಿಣ ಕ್ರಮ ಜಾರಿಯಲ್ಲಿದೆ. ಆದ ಕಾರಣ ಗೋವಾ ಸಚಿವ ಈಗ ಇದರ ಜವಾಬ್ಧಾರಿಯನ್ನು ಬಾರ್ ಮಾಲೀಕರ ಮೇಲೆ ಹೊರೆಸುವುದಾಗಿ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಚಿವರ ಈ ಹೇಳಿಕೆಯನ್ನು ಬಾರ್ ಮಾಲೀಕರು ವಿರೋಧಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.
ಕೆಲ ಸಮಯಗಳ ಹಿಂದೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸಂಚಾರ ಪೋಲೀಸರು ವಾಹನ ಚಾಲಕರ ಮೀಟರ್ ಪರೀಕ್ಷೆ ಆರಂಭಿಸಿದ್ದರು. ಈ ಅಭಿಯಾನದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕುಡಿದು ವಾಹನ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿದ್ದು, ಕುಡಿದು ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿದೆ.