Ad Widget .

ಇಬ್ಬರು ಕಾಡು ಹಂದಿ ಬೇಟೆಗಾರರ ಬಂಧನ

ಸಮಗ್ರ ನ್ಯೂಸ್: ಕಾಡು ಹಂದಿ ಬೇಟೆಯಾಡುತ್ತಿದ್ದ ಇಬ್ಬರನ್ನು ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದವರು ಭಾನುವಾರ ಬಂಧಿಸಿ, ಮೂರು ಜೀವಂತ ಕಾಡುಹಂದಿ, ಹಗ್ಗ ಹಾಗೂ ವಿವಿಧ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಳಿಗೇರಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.

Ad Widget . Ad Widget .

ರಡೇರಹಟ್ಟಿ ಗ್ರಾಮದ ನಿವಾಸಿಯಾದ ಸದಾಶಿವ ಬಸವಂತ ಕಾಂಬಳೆ ಹಾಗೂ, ಅಥಣಿ ಗವಿಸಿದ್ದನಮಡ್ಡಿಯ ನಿವಾಸಿಯಾದ ಶಿವಾಜಿ ಅಶೋಕ ಭಜಂತ್ರಿ (35) ಬಂಧಿತ ಆರೋಪಿಗಳು. ಕಾಡುಹಂದಿಯ ಮಾಂಸವನ್ನು ಅಥಣಿ, ಜಮಖಂಡಿ ಸೇರಿ ಮಹಾರಾಷ್ಟ್ರದ ಮಿರಜ, ಸಾಂಗಲಿ ನಗರಗಳಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Ad Widget . Ad Widget .

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ರೋಹಿಣಿ ಪಾಟೀಲ, ಸಿಬ್ಬಂದಿ ಶಿವಾನಂದ ಅರಬೆಂಚಿ, ಮಾರುತಿ ನಾಯಕ, ಕೆ.ಬಿ.ಕಂಠಿ, ಎನ್.ಎಸ್.ನಾಯಕ, ಎಸ್.ಎಸ್.ರೆಡ್ಡಿ ಹಾಗೂ ಉಮೇಶ ಪಟ್ಟೇದ ಕಾರ್ಯಾಚರಣೆಯಲ್ಲಿದ್ದರು.

ಪ್ರಶಾಂತ್: ಬೆಳಗಾವಿ ಪ್ರತಿನಿಧಿ ವರದಿ

Leave a Comment

Your email address will not be published. Required fields are marked *