Ad Widget .

‘ಕೋರ್ಟ್ ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳಕಾಗಲ್ಲ, ಧರ್ಮಸ್ಥಳಕ್ಕೆ ಹೋದ್ರೆ ಖಂಡಿತಾ ನ್ಯಾಯ ಸಿಗುತ್ತೆ’| ಅಚ್ಚರಿಯ ಮಾತುಗಳನ್ನಾಡಿದ ಬಿ.ಎಲ್ ಸಂತೋಷ್

ಸಮಗ್ರ ನ್ಯೂಸ್: ‘ಕೋರ್ಟ್ ಗೆ ಹೋದರೆ ನ್ಯಾಯ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ, ಪೊಲೀಸ್ ಠಾಣೆಗೆ ಹೋದರೆ ನ‍್ಯಾಯ ಸಿಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ಧರ್ಮಸ್ಥಳಕ್ಕೆ ಹೋದರೆ ಖಂಡಿತ ನ್ಯಾಯ ಸಿಗುತ್ತದೆ ಎಂದು ನೂರಾರು ವರ್ಷಗಳ ಪರಂಪರೆ ಹೇಳುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾಗಿ ವರದಿಯಾಗಿದೆ.

Ad Widget . Ad Widget .

ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶದಲ್ಲಿ ಅವರು ಮಾತನಾಡಿದ್ದು, ‘ತರಳಬಾಳು ಪೀಠಕ್ಕೆ ದೂರು ನೀಡದರೆ ನ್ಯಾಯ ಸಿಗುತ್ತೆ ಎಂದು ಚಿತ್ರದುರ್ಗ ಜನರು ಹೇಳುತ್ತಾರೆ, ಅಲ್ಲಿ ತೀರ್ಪು ಸಿಗಲ್ಲ ನ್ಯಾಯ ಸಿಗುತ್ತದೆ. ಇದು ದೇಶದ ಧರ್ಮವಾಗಿದೆ’ ಎಂದಿದ್ದಾರೆ.

Ad Widget . Ad Widget .

”ನಮ್ಮ ದೇಶದಲ್ಲಿ ಮನೆ, ಮಠ, ಮಂದಿರ ಎಂಬ ಸಂಸ್ಕಾರ ಕೇಂದ್ರಗಳಿವೆ. ದೇವಸ್ಥಾನ ಎನ್ನುವ ವ್ಯವಸ್ಥೆ ಇದೆ, ಈ ದೇಶದಲ್ಲಿ ಧರ್ಮ ಆಡಳಿತದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಮಧ್ಯದಲ್ಲಿ ಯಾರದ್ದೋ ಕೆಲವರ ಮಹತ್ವಾಕಾಂಕ್ಷೆಗೆ ಇನ್ಯಾರದೋ ಕುತಂತ್ರಗಳಿಗೆ ನಮ್ಮ ದೇಶದಲ್ಲಿ ಜಾತ್ಯಾತೀತತೆ ಸೆಕ್ಯುಲರಿಸಮ್ ಭ್ರಮೆಯನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *