ಸುಳ್ಯ : ಸರಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ಕಾರಿನೊಳಗೆ ಮೃತದೇಹ ಪತ್ತೆ

ಸಮಗ್ರ ನ್ಯೂಸ್: ಸುಳ್ಯ ಸರಕಾರಿ ಆಸ್ಪತ್ರೆಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ಮಾರುತಿ 800 ಕಾರಿನಲ್ಲಿ ವ್ಯಕ್ತಿಯೋರ್ವರ ಮೃತದೇಹ ಇಂದು ಪತ್ತೆಯಾಗಿದೆ.
ಪೆರಾಜೆಯ ಪೆರಂಗಾಜೆ ಲೋಕಯ್ಯ ಎಂಬವರ ಪುತ್ರ ಗೌರೀಶ್ ಎಂಬವರ ಮೃತದೇಹ ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿ.ವೈ.ಎಸ್.ಪಿ‌. ವೀರಯ್ಯ ಹಿರೇಮಠ್ ,ಸುಳ್ಯ ಪಿ.ಎಸ್.ಐ. ದಿಲೀಪ್ ಹಾಗೂ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಕಳೆದ ಎರಡು ತಿಂಗಳಿಂದ ಕಾಣೆಯಾಗಿದ್ದರು ಎನ್ನಲಾಗಿದ್ದು ಪತ್ನಿ, 1 ಗಂಡು ಹಾಗೂ 1 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Ad Widget ... ..

ಗೌರೀಶ ಪತ್ನಿ ಕಳೆದ ಎರಡು ತಿಂಗಳಿಂದ ಮನೆ ಬಿಟ್ಟು ಹೆಣ್ಣು ಮಗುವಿನೊಂದಿಗೆ ತೆರಳಿದ್ದು ಗೌರೀಶ್ ಮದ್ಯ ವ್ಯಸನಿಯಾಗಿದ್ದ ಎಂದು ಹೇಳಲಾಗಿದೆ, ಇದೀಗ ಇದು ಆತ್ಮಹತ್ಯೆ, ಅಥಾವ , ಮದ್ಯಪಾನ ಮಾಡಿ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿದೆ

Ad Widget

Leave a Comment

Your email address will not be published. Required fields are marked *