Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೇಷ:
ಮೇಷ ರಾಶಿಯಲ್ಲಿ ರಾಹು, ದಶಮ ಶನಿ ಇರುವುದರಿಂದ, ತಮ್ಮ ಕೆಲಸ ಕಾರ್ಯಗಳು ಯಥಾಸ್ಥಿತಿ ಮುಂದುವರಿಯುತ್ತವೆ. ಗುರುಬಲ, ದೈವಬಲವು ಪೂರ್ತಿ ಪ್ರಮಾಣದಲ್ಲಿ ಇಲ್ಲದಿರುವುದರಿಂದ ಅತಿ ಮುಖ್ಯವಾದ ಕಾರ್ಯ ಕೈಬಿಡಿ. ಮನುಷ್ಯನಿಗೆ ದೈವಬಲ ಸದಾಕಾಲ ಬೇಕೇ ಬೇಕು. ಗುರುಹಿರಿಯರನ್ನು ನಿತ್ಯ ಪ್ರಾರ್ಥಿಸಿದರೆ ದೈವಬಲ ವೃದ್ಧಿಯಾಗುತ್ತದೆಂದು ಹೇಳಿದ್ದಾರೆ. ಸುಬ್ರಹ್ಮಣ್ಯ ಪ್ರಾರ್ಥನೆ ಮುಂದುವರಿಸಿ. ಗುರುಚರಿತ್ರೆಯ ಮೂರನೇ ಅಧ್ಯಾಯ ಓದಿ.

Ad Widget . Ad Widget . Ad Widget .

ವೃಷಭ:
ಹತ್ತು ಹಲವಾರು ಕಾರ್ಯಗಳು ಒಮ್ಮೆಲೆ ಕೈಗೂಡುವುದಿಲ್ಲ. ಏಕಾದಶದಲ್ಲಿ ಗುರುವಿದ್ದಾನೆ. ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಗುರುಸ್ಮರಣೆ ಒಂದೇ ಕಾರ್ಯವನ್ನು ನಡೆಸಿ ಗೌರವ ತಂದುಕೊಡುತ್ತದೆ. ವೃಷಭದಲ್ಲಿ ಅಂಗಾರಕನಿರುವುದರಿಂದ ನಿರೀಕ್ಷಿಸಿದ ಫಲ ಸಿಗುವುದು ಕಷ್ಟವಾಗುತ್ತದೆ.

ಮಿಥುನ:
ಮಿಥುನ ರಾಶಿಗೆ ನವಮ ಗುರು, ಅಷ್ಟಮ ಶನಿ, ಒಂಭತ್ತರ ಗುರು ಸ್ವಕ್ಷೇತ್ರದಲ್ಲಿ ಕುಳಿತಿದ್ದಾನೆ. ದೈವಕೃಪೆ ಇರುವುದರಿಂದ ನಿಮ್ಮನ್ನು ಯಾರೂ ಏನೂ ಮಾಡಲಾರರು. ಶಿಸ್ತುಬದ್ಧ ಜೀವನವನ್ನು ಅದಕ್ಕೆ ತಕ್ಕನಾದ ಶ್ರದ್ಧೆಯನ್ನು ತೋರಿದರೆ ನಿಮ್ಮ ಕೆಲಸದಲ್ಲಿ ಪೂರ್ಣ ಪ್ರಮಾಣದ ಯಶಸ್ಸು, ಧೈರ್ಯ, ಕೀರ್ತಿ ಲಭಿಸುವುದು.

ಕಟಕ:
ಜಲರಾಶಿಯಲ್ಲಿ ಹುಟ್ಟಿದ ನಿಮಗೆ ಸ್ಥಾನಮಾನಗಳನ್ನು ಕೊಟ್ಟು ಮನುಷ್ಯನು ಪ್ರಾಣಿಯಂತೆ ವರ್ತಿಸಬಾರದೆಂದು ಸಲಹೆ ಕೊಟ್ಟಿದ್ದಾರೆ. ನವಮದಲ್ಲಿ ಗುರುವಿರುವುದರಿಂದ ನಿರೀಕ್ಷೆಗೆ ಮೀರಿದ ಕೆಲಸ ಮಾಡಿಸಿ ಖ್ಯಾತಿಯನ್ನು, ಕೀರ್ತಿಯನ್ನು ಕೊಡುವ ಸಮಯ. ಅಷ್ಟಮದಲ್ಲಿ ಶನಿ ಸ್ಥಿತನಾಗಿರುವುದರಿಂದ ನಿರೀಕ್ಷಿಸಿದ ಫಲ ದೊರೆಯದು.

ಸಿಂಹ:
ದ್ವಿತೀಯ ಕೇತುವು ನಿಮ್ಮ ಕಾರ್ಯವೈಖರಿ ಬದಲಿಸಿ, ಮಾಡದೆ ಬಿಟ್ಟ ಕೆಲಸವನ್ನು ಪೂರ್ತಿ ಮಾಡಲು ಅನುವು ಮಾಡಿಕೊಡುತ್ತಾನೆ. ಸೂರ್ಯನಾರಾಯಣನ ಪ್ರಾರ್ಥನೆ ಮಾಡಿ. ಭಾನುವಾರದಂದು ಸೂರ್ಯ ಕವಚ ಪಠಿಸಿ. ಸೂರ್ಯನಿಗೆ ಅರ್ಘ್ಯ ನೀಡಿ ಒಂದು ಹೊತ್ತು ಊಟ ಮಾಡಿದರೆ ಮನಸ್ಸು ಶುದ್ಧಿಯಾಗಿ ಬುದ್ಧಿಯು ವೃದ್ಧಿಯಾಗುತ್ತದೆ.

ಕನ್ಯಾ:
ಬೆಕ್ಕು ಯಾರಿಲ್ಲದಾಗ ಬಂದು ಹಾಲಿಗೆ ಬಾಯಿಹಾಕಿ ಹೋದರೂ ಮನೆಯ ಹೆಣ್ಣು ಮಕ್ಕಳು ಅದನ್ನು ಕಂಡುಹಿಡಿಯುತ್ತಾರೆ. ಅದನ್ನು ಉಪಯೋಗಿಸಬಾರದೆಂದು ಹೇಳುತ್ತಾರೆ. ಅದರಂತೆ ಕನ್ಯಾರಾಶಿಯಲ್ಲಿ ಹುಟ್ಟಿದ ನೀವು ಅದರಲ್ಲೂ ಉತ್ತರ ನಕ್ಷತ್ರದವರು ಎಚ್ಚರಿಕೆಯಿಂದ ಸಾಗಿ ಯಾರ ಶಾಪ, ತಾಪಗಳಲ್ಲಿ ಸಿಲುಕಿ ನಲುಗಿ ಹೋಗಬಾರದು. ಈಗಿನಿಂದಲೇ ಚಿತ್ತಾ ನಕ್ಷತ್ರದವರು ಸೂರ್ಯಕವಚ ಪಠಿಸಿ, ಸೂರ್ಯನಿಗೆ ಅಘರ್Â ಕೊಟ್ಟು ಸುಖವನ್ನು ಪಡೆಯಿರಿ.

ತುಲಾ:
ತುಲಾ ರಾಶಿಯವರಿಗೆ ಗ್ರಹಗಳ ವಿದ್ಯಮಾನ ಬೇರೆ ಇದ್ದು, ಸೂರ್ಯಗ್ರಹಣದ ಸಮಯದಲ್ಲಿ ತಪ್ಪದೇ ಕಾರಣ ಹುಡುಕದೆ ಗ್ರಹಣ ಕಾಲದ ನಿಮಿತ್ತ ಶಾಂತಿಯನ್ನು ಮಾಡಿಕೊಳ್ಳಿ. ಅದು ನಿಮ್ಮ ದೋಷವನ್ನು ತೆಗೆದು ನಿಮಗೆ ಸದೃಢತೆ ನೀಡಿ ನೀವು ನಿರೀಕ್ಷೆಗೂ ಮೀರಿದ ಧೈರ್ಯ ಕೀರ್ತಿ, ಯಶೋಲಾಭ ಕೊಡುತ್ತದೆ. ಪ್ರಾತಃಕಾಲದಲ್ಲಿ ನವಚಂಡಿಕಾ ಪಾಠ ಪಾರಾಯಣ ಮಾಡಿಸಿರಿ.

ಧನಸ್ಸು:
ರಾಜಯೋಗವನ್ನು ಕೊಡುವ ಏಕೈಕ ಗ್ರಹ ಸೂರ್ಯ. ನಿಮ್ಮ ಪ್ರಯತ್ನಗಳು ವೇಗದಲ್ಲಿರಲಿ. ಅದೇ ವೇಗದಲ್ಲಿ ನಿಮ್ಮ ಧನವೂ ಕೈಸೇರುತ್ತದೆ. ಬಾಲ್ಯಾವಸ್ಥೆಯಲ್ಲಿ ಶಿಶುವು ಹಸಿದಾಗ ಊಟಕ್ಕೆ ಅಮ್ಮನನ್ನೇ ಕೇಳುತ್ತದೆ. ಅದರಂತೆ ಧನ ಬರಲು ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ. ಸಾಧ್ಯವಾದಲ್ಲಿ ಕೊಲ್ಹಾಪುರ ಮಹಾಲಕ್ಷ್ಮಿಯನ್ನು ದರ್ಶಿಸಿ ಬನ್ನಿ.

ವೃಶ್ಚಿಕ:
ಗಿಡದಲ್ಲಿ ಹೂವುಗಳು ಹೊಸದಾಗಿ ಪ್ರತಿನಿತ್ಯ ಅರಳುತ್ತವೆ. ಪಂಚಮಿ ಗುರುವು ನಿಮ್ಮ ಸಂರಕ್ಷಣೆ ಮಾಡುತ್ತಾನೆ. ಸದಾ ದೈವ ಪ್ರಾರ್ಥನೆ ಇರಲಿ. ನಿರೀಕ್ಷಿಸಿದ ಧನವೂ ಕೈಸೇರಿ ಜೀವನದಲ್ಲಿ ಸುಖ- ನೆಮ್ಮದಿ ಕಾಣುವ ಸಮಯ. ಗಣಪತಿಯನ್ನು ಪ್ರಾರ್ಥಿಸಿ. ಇಚ್ಛಿತ ಕಾರ್ಯಗಳು ಕೈಗೂಡುತ್ತವೆ.

ಮಕರ:
ಇನ್ನು ಎರಡೂವರೆ ತಿಂಗಳ ಕಾಲ ಶನಿಯ ಅಂತ್ಯ ಸಂಚಾರ ಮುಂದುವರಿದು, ತ್ರಿಶಂಕು ಲೋಕದಲ್ಲಿ ನಿಮ್ಮ ವಾಸವಿದೆ. ದೇವರು ಏನನ್ನು ಕೊಡುತ್ತಾನೋ ಅದನ್ನೇ ತೃಪ್ತಿಯಿಂದ ಸ್ವೀಕರಿಸಬೇಕು. ಅನಗತ್ಯ ಖರ್ಚು ಬೇಡ. ಸಿಗದಿದ್ದರೆ ವ್ಯಥೆಯೂ ಬೇಡ. ಬಂದು ಸೇರುವ ಧನವನ್ನು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡಿ. ಆದಾಯ, ಕೀರ್ತಿಯೂ ಬೆಳೆಯುತ್ತಾ ಹೋಗುತ್ತದೆ.

ಕುಂಭ:
ಅದೃಷ್ಟವಶಾತ್ 2ರಲ್ಲಿ ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ನೀವು ಬಚಾವಾಗಿದ್ದೀರ. ಹಾಗಾಗಿಯೂ ನಿಮ್ಮನ್ನು ದ್ವಿತೀಯ ಗುರುವು ಕಾಪಾಡುತ್ತಾ ಬಂದಿದ್ದಾನೆ. ಗುರುಚರಿತ್ರೆಯ 14ನೇ ಅಧ್ಯಾಯ ಓದಿರಿ. ಸಾಡೇಸಾತಿಯ ಈ ಸಮಯದಲ್ಲಿ ಕಷ್ಟಗಳಿಂದ ಪಾರಾಗುತ್ತೀರ. ಶನಿ ಅಷ್ಟೋತ್ತರ ಪ್ರತಿನಿತ್ಯ ಪಠಿಸಿ.

ಮೀನ:
ಆತ್ಮಕಾರಕನಾದ ಗುರುವು ಲಗ್ನದಲ್ಲಿ ಶುಭವನ್ನು ಸೌಖ್ಯವನ್ನು ತಂದುಕೊಡುತ್ತಾನೆ. ಏಕಾದಶದಲ್ಲಿ ಶನಿ ಇದ್ದು, ನೀವು ಬಯಸದೆ ಯಶಸ್ಸು, ಧನ, ಕಾರ್ಯದಲ್ಲಿ ಉತ್ಸಾಹ- ಧೈರ್ಯ ಕೊಟ್ಟು ನಿಮ್ಮನ್ನು ಸಲಹುತ್ತಿದ್ದಾನೆ. ದೇವರ ಪೂಜಾ ವಿಧಾನ ಹಲವು. ಸದ್ಯದಲ್ಲಿ ನಿಮ್ಮ ತಂದೆ-ತಾಯಿಯನ್ನೇ ಲಕ್ಷ್ಮೀ-ನಾರಾಯಣ ಎಂದು ಪೂಜಿಸಿ ಅವರ ಮಾತನ್ನು ನಂಬಿ ಮುಂದೆ ಸಾಗಿರಿ. ಕುಲಗುರುಗಳ ದರ್ಶನ ಮಾಡಿರಿ. ಸೋಮವಾರದಂದು ಕಾಲಭೈರವನನ್ನು ಪೂಜಿಸಿ.

Leave a Comment

Your email address will not be published. Required fields are marked *