Ad Widget .

‘ಕಾಂತಾರ’ ನೋಡಿದ ಕಿಚ್ಚ ಏನಂದ್ರು ಗೊತ್ತಾ?

ಸಮಗ್ರ ನ್ಯೂಸ್: ನಟ ಸುದೀಪ್ ಕಾಂತಾರ ಸಿನಿಮಾವನ್ನು ನೋಡಿ, ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಪತ್ರವನ್ನೇ ಬರೆದಿದ್ದಾರೆ. ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ ಎಂದು ಹೇಳಿದ್ದಾರೆ.

Ad Widget . Ad Widget .

ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ. ಇನ್ನು, ರಿಷಭ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ತಟ್ಟುತ್ತಾರೆ. ಚಿತ್ರ ನೋಡಿ ನನಗನಿಸಿದ್ದೆಂದರೆ, ಇಂಥದ್ದೊಂದು ಚಿತ್ರ ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅಂಥನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ.

Ad Widget . Ad Widget .

ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಭ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ ನಮನ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಸಂಗೀತ ನಿರ್ದೇಶಕ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಸಂಸ್ಥೆಗೂ ನನ್ನ ಕೃತಜ್ಱತೆಗಳು.

ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗಳಿಗೆ ತಕ್ಕ ಹಾಗೆ ಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ ಅಲ್ಲ, ನಮ್ಮ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *