Ad Widget .

ಗೋವಾ: ಜಲಪಾತದಲ್ಲಿ ಮುಳುಗಿ ಉಡುಪಿ ಮೂಲದ ಯುವಕ ಸಾವು| ಈತ ಸಾವನ್ನಪ್ಪಿದ ಕಾರಣವೇ ವಿಚಿತ್ರ!!

ಸಮಗ್ರ ನ್ಯೂಸ್: ರಜೆಯ ಮಜಾ ಸವಿಯಲು ಗೋವಾಕ್ಕೆ ಬಂದಿದ್ದ ಉಡುಪಿಯ ಯುವಕ ಆದಿತ್ಯ ಶೆಟ್ಟಿ (28) ಪಾಡಿ ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಆದಿತ್ಯ ಶೆಟ್ಟಿ ಮೂಲತಃ ಉಡುಪಿಯವರಾಗಿದ್ದು, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

Ad Widget . Ad Widget .

ಸ್ನೇಹಿತರೊಂದಿಗೆ ಗೋವಾ ಪ್ರವಾಸಕ್ಕೆ ಬಂದಿದ್ದು, ಪಾಡಿ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಯುವಕನ ಶವವನ್ನು ಹೊರತೆಗೆದಾಗ ಆದಿತ್ಯ ಕಾಲಿಗೆ ಹಾವು ಸುತ್ತಿಕೊಂಡಿರುವುದು ಕಂಡುಬಂದಿದೆ.

Ad Widget . Ad Widget .

ನೀರಿಗೆ ಇಳಿದ ಸಂದರ್ಭದಲ್ಲಿ ಕಾಲಿಗೆ ಹಾವು ಕಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಈ ಯುವಕರು ಕಳೆದ ಎರಡು ದಿನಗಳ ಹಿಂದೆ ಗೋವಾಕ್ಕೆ ಬಂದು ಕಾಣಕೋಣದ ಹೋಟೆಲ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment

Your email address will not be published. Required fields are marked *