ವಿಜಯಪುರ: ಕಾಲುವೆಯಲ್ಲಿ ‌ಮುಳುಗಿ ವ್ಯಕ್ತಿ ಸಾವು

ಸಮಗ್ರ‌ ನ್ಯೂಸ್: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದ ಬಳಿಯ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮೃತಪಟ್ಟವನನ್ನು ತಡಲಗಿ ಗ್ರಾಮದ ರೈತ ಹನುಮಂತ ಈರಪ್ಪ ಹಡಪದ (45) ಎಂದು ಗುರುತಿಸಲಾಗಿದೆ.

Ad Widget ... ..

ಈತ ಅ.5 ರಂದು ಮನೆಯಿಂದ ಕುರಿಗಳನ್ನು ಮೇಯಿಸಲು ಹೋಗುವುದಾಗಿ ಹೇಳಿ ಕುರಿಗಳನ್ನು ದಡ್ಡಿಯಲ್ಲಿ ಬಿಟ್ಟು ಮರಳಿ ಬರುವಾಗ ಈ ಘಟನೆ ಸಂಭವಿಸಿದ್ದು, ಈತ ಮೂರ್ಛೆ ರೋಗದಿಂದ ಬಳಲುತ್ತಿದ್ದು, ಕಾಲುವೆಯಲ್ಲಿ ನೀರು ಕುಡಿಯಲು ಹೋದ ವೇಳೆ ಮೂರ್ಛೆ ಬಂದು ಕಾಲು ಜಾರಿ ಬಿದ್ದಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

Ad Widget

ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *