ಕಬಡ್ಡಿ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದ ವನ್ಷಿಕಾ

ಸಮಗ್ರ ನ್ಯೂಸ್: ಪ್ರೊ ಕಬಡ್ಡಿ ಲೀಗ್ ಪಂದ್ಯಗಳ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡುವ ಸಂಪ್ರದಾಯ ಮುಂದುವರಿಸಲಾಯಿತು. ಕನ್ನಡ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿರುವ ಪುಟಾಣಿ ವಂಶಿಕಾ ಅಂಜನಿ ಕಶ್ಯಪ ಟೂರ್ನಿಯ ಮೊದಲ ದಿನ ರಾಷ್ಟ್ರಗೀತೆ ಹಾಡಿದರು.

Ad Widget ... ..

ನಟ ಮಾಸ್ಟರ್ ಆನಂದ್ ಪುತ್ರಿಯಾಗಿರುವ 5 ವರ್ಷದ ವಂಶಿಕಾ, ಟೂರ್ನಿ ಇತಿಹಾಸದಲ್ಲಿ ಈ ಗೌರವ ಪಡೆದ ಅತ್ಯಂತ ಕಿರಿಯರೆನಿಸಿದರು.

Ad Widget

ಹೊಸತನದಿಂದ ಕೂಡಿದ ಬೆಂಗಳೂರು ಬುಲ್ಸ್ ತಂಡ 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಶುಭಾರಂಭ ಕಾಣುವಲ್ಲಿ ಯಶಸ್ವಿಯಾಗಿದೆ. ಉದ್ಯಾನನಗರಿಯ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಟೂರ್ನಿಯ 2ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 34-29 ಅಂಕಗಳಿಂದ ಗೆಲುವು ದಾಖಲಿಸುವ ಮೂಲಕ ಮಹೇಂದರ್ ಸಿಂಗ್ ಬಳಗ ಭರ್ಜರಿ ಆರಂಭ ಕಂಡಿತು.

ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್​ 2022 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯು ಮುಂಬಾ ತಂಡವನ್ನು 41-27 ಅಂಕಗಳಿಂದ ಮಣಿಸುವ ಮೂಲಕ ಭರ್ಜರಿ ಆರಂಭ ಕಂಡಿತು.

ಇಂದಿನ ಪಂದ್ಯಗಳು

  • ಪಟನಾ ಪೈರೇಟ್ಸ್​ vs ಪುಣೇರಿ ಪಲ್ಟಾನ್​ (ರಾತ್ರಿ 7.30ಕ್ಕೆ)
  • ಗುಜರಾತ್​ ಜೈಂಟ್ಸ್​ vs ತಮಿಳ್​ ತಲೈವಾಸ್​ (ರಾತ್ರಿ 8.30ಕ್ಕೆ)
  • ಬೆಂಗಾಲ್​ ವಾರಿಯರ್ಸ್​ vs ಹರಿಯಾಣ ಸ್ಟೀಲರ್ಸ್​ (ರಾತ್ರಿ 9.30 ಕ್ಕೆ)

Leave a Comment

Your email address will not be published. Required fields are marked *