Ad Widget .

‘ಕಾಂತಾರ’ ಸಿನಿಮಾ ಪೋಸ್ಟರ್ ಮೇಲೆ ವಿಕೃತ ಕೃತ್ಯ ಎಸಗಿದ ಕಿಡಿಗೇಡಿಗಳು| ಶಿವಮೊಗ್ಗದಲ್ಲಿ ದೇವರಿಗೆ ಆಯ್ತು ಅವಹೇಳನ!

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿವೆ. ಮೊದಲನೇ ದಿನದಿಂದಲೂ ಈವರೆಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೂಲಗಳ ಪ್ರಕಾರ 25 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ಪ್ರೇಕ್ಷಕನೂ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದರೆ, ಶಿವಮೊಗ್ಗದಲ್ಲಿ ವಿಕೃತ ಮನಸ್ಸಿನವರು ಅವಹೇಳನ ಮಾಡಿದ್ದಾರೆ.

Ad Widget . Ad Widget .

ಶಿವಮೊಗ್ಗದಲ್ಲಿ ಕಾಂತಾರ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದ್ದು, ಶಿವಮೊಗ್ಗದ ಗೋಡೆ ಗೋಡೆಗಳ ಮೇಲೆ ಕಾಂತಾರ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿದೆ. ಆ ಪೋಸ್ಟರ್ ನೋಡಿ ಕಣ್ತುಂಬಿಕೊಳ್ಳಬೇಕಾಗಿದ್ದ ಕೆಲ ವಿಕೃತ ಮನಸ್ಸಿನವರು ಪೋಸ್ಟರ್ ಮೇಲೆ ವಿಕೃತ ಬರಹವನ್ನೇ ಬರೆದಿದ್ದಾರೆ. ದೇವರಿಗೆ ಅವಹೇಳನ ಮಾಡುವಂತಹ ಪದ ಬಳಕೆ ಮಾಡಿದ್ದಾರೆ. ಈ ಬರಹವುಳ್ಳ ಪೋಸ್ಟರ್ ನೋಡಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Ad Widget . Ad Widget .

ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಕಾಂತಾರ ಸಿನಿಮಾ ಪೋಸ್ಟರ್ ಮೇಲೆ ‘F * * K YOU G * D’ ಅಂತಾ ಕಿಡಿಗೇಡಿಗಳು ಬರೆದಿದ್ದು, ಪೋಸ್ಟರ್ ಮೇಲೆ ಪೆನ್ನಿನಿಂದ ಈ ಬರಹವನ್ನು ಬರೆಯಲಾಗಿದೆ. ಸ್ಥಳಕ್ಕೆ ಜಯನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ತಕ್ಷಣವೇ ಅವಹೇಳನಕಾರಿ ಬರಹ ತೆಗೆಸಿದ್ದಾರೆ.

Leave a Comment

Your email address will not be published. Required fields are marked *