Ad Widget .

ಸೋನಿಯಾ ಗಾಂಧಿಯ ಶೂ ಲೇಸ್ ಕಟ್ಟಿದ ರಾಹುಲ್| ಫೋಟೋ ವೈರಲ್ ಆಗ್ತಿದ್ದಂತೆ ಬಿಜೆಪಿ ಟೀಂ ಮಾಡಿದ್ದೇನು ಗೊತ್ತಾ? ಇಲ್ಲಿದೆ ಅಸಲಿ ಸುದ್ದಿ…

ಸಮಗ್ರ ನ್ಯೂಸ್: ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅವರು ವಯಸ್ಸಾದ ವ್ಯಕ್ತಿ ಅಥವಾ ಮಗುವಿನೊಂದಿಗೆ ಇರುವ ಫೋಟೋಗಳು ಕಾಣಿಸಿಕೊಳ್ಳುತ್ತಿವೆ. ಇದೀಗ ಬಿಜೆಪಿ ನಾಯಕರು, ಕಾರ್ಯಕರ್ತರು, ಬೆಂಬಲಿಗರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ಉಸ್ತುವಾರಿಗಳು ರಾಹುಲ್ ಅವರ ಈ ವೈರಲ್ ಚಿತ್ರಗಳನ್ನು ಎದುರಿಸುವುದು ಹೇಗೆ ಎಂಬ ಕಠಿಣ ಸಮಸ್ಯೆಗೆ ಸಿಲುಕಿದ್ದಾರೆ.

Ad Widget . Ad Widget .

ಸದ್ಯಕ್ಕೆ ಬಿಜೆಪಿಯ ತಂತ್ರ ಏನೆಂದರೆ ರಾಹುಲ್ ಫೋಟೋ ವೈರಲ್ ಆದ ತಕ್ಷಣ ಬಿಜೆಪಿಯ ಸೋಶಿಯಲ್ ಮೀಡಿಯಾ ಟೀಮ್ ಪ್ರಧಾನಿ ಮೋದಿಯವರ ಚಿತ್ರವನ್ನು ವೈರಲ್ ಮಾಡಲು ತೊಡಗಿದೆ.

Ad Widget . Ad Widget .

ರಾಹುಲ್ ಗಾಂಧಿ ಅವರ ಇದೇ ರೀತಿಯ ಚಿತ್ರ ಗುರುವಾರ ವೈರಲ್ ಆಗಿತ್ತು, ಇದರಲ್ಲಿ ಅವರು ತಮ್ಮ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಶೂ ಲೇಸ್ ಅನ್ನು ಕಟ್ಟಿದ್ದಾರೆ. ವಾಸ್ತವವಾಗಿ, ಗುರುವಾರ ಸೋನಿಯಾ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದರು. ಪ್ರಯಾಣದ ವೇಳೆ ಸೋನಿಯಾ ಅವರ ಪಾದರಕ್ಷೆಯ ಲೇಸ್ ಸಡಿಲವಾಯಿತು. ನಡೆಯಲು ತೊಂದರೆಯಾದಾಗ ರಾಹುಲ್ ಗಾಂಧಿ ಕುಳಿತು ತಾಯಿಯ ಶೂ ಲೇಸನ್ನು ಕಟ್ಟಿದರು. ಈ ಚಿತ್ರ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು, ಬೆಂಬಲಿಗರು ಈ ವಿಡಿಯೋವನ್ನು ಸಖತ್ ವೈರಲ್ ಮಾಡಿದ್ದಾರೆ.

ಈಗ ರಾಹುಲ್ ಅವರ ಈ ಚಿತ್ರವನ್ನು ಹೇಗೆ ಎದುರಿಸುವುದು ಎಂಬ ಸವಾಲು ಬಿಜೆಪಿ ಬೆಂಬಲಿಗರು ಮತ್ತು ಪಕ್ಷದ ಸಾಮಾಜಿಕ ಮಾಧ್ಯಮ ತಂಡದಲ್ಲಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಒಂದು ಚಿತ್ರವನ್ನು ಕಂಡುಹಿಡಿದಿದ್ದು, ಅದರಲ್ಲಿ ಪ್ರಧಾನಿ ಬಡ ಮಹಿಳೆಯ ಕಾಲಿಗೆ ಚಪ್ಪಲಿ ಹಾಕುತ್ತಿದ್ದಾರೆ.

ಇದಕ್ಕೂ ಮುನ್ನ ರಾಹುಲ್ ಮಳೆಯಲ್ಲಿ ನೆನೆದುಕೊಂದು ಭಾಷಣ ಮಾಡುತ್ತಿರುವ ಫೋಟೋ ವೈರಲ್ ಆಗಿತ್ತು. ನಂತರ ಬಿಜೆಪಿ ಸಾಮಾಜಿಕ ಮಾಧ್ಯಮ ಉಸ್ತುವಾರಿಗಳು ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರ ಇದೇ ರೀತಿಯ ಚಿತ್ರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು.

Leave a Comment

Your email address will not be published. Required fields are marked *