Ad Widget .

ಕಿರುತೆರೆಯಲ್ಲೊಂದು ಲವ್ ಜಿಹಾದ್ ಪ್ರಕರಣ| ಪತಿಯ ಅನೈತಿಕ ಸಂಬಂಧದ‌ ವಿರುದ್ದ ದೂರಿತ್ತ ನಟಿ ದಿವ್ಯಾ ಶ್ರೀಧರ್

ಸಮಗ್ರ ನ್ಯೂಸ್: ಕನ್ನಡ ಕಿರುತೆರೆಯ ಜನಪ್ರಿಯ ‘ಆಕಾಶ ದೀಪ’ ಧಾರಾವಾಹಿಯಲ್ಲಿ ಅಭಿನಯಿಸಿರುವ ನಟಿ ದಿವ್ಯಾ ಶ್ರೀಧರ್ ಇದೀಗ ತೆಲುಗು ಕಿರುತೆರೆ ಲೋಕದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ‘ಸೇವಂತಿ’ ಧಾರಾವಾಹಿಯಲ್ಲಿ ನಟಿಸುತ್ತಿರುವ ಚೆಲುವೆ ವೈವಾಹಿಕ ಜೀವನದ ಗುಟ್ಟು ರಟ್ಟು ಮಾಡಿದ್ದಾರೆ. ಪತಿ ಮೋಸ ಮಾಡುತ್ತಿದ್ದಾನೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

Ad Widget . Ad Widget .

ತಮಿಳು ಸೀರಿಯಲ್‌ನಲ್ಲಿ ನಟಿಸುವಾಗ ದಿವ್ಯಾ ಶ್ರೀಧರ್‌ಗೆ ಆರ್ನವ್ ಪರಿಚಯ ಆಗಿದೆ. ದಿವ್ಯಾಳನ್ನು ಪ್ರೀತಿಸಬೇಕು ಎಂದು ಅಮ್ಜದ್ ​ಖಾನ್ ಎಂದು ನಿಜವಾದ ಹೆಸರನ್ನು ಹೇಳದೇ ಆರ್ನವ್ ಎಂದು ಸುಳ್ಳು ಹೇಳಿ ಪರಿಚಯ ಮಾಡಿಕೊಂಡಿದ್ದಾರೆ. ಈಗ ಇದೇ ಆರ್ನವ್‌ ಜೀವನದ ಅಸಲಿ ಕಥೆ ಬೆಳಕಿಗೆ ಬಂದ ಮೇಲೆ ದೂರು ನೀಡಿದ್ದಾರೆ. ದಿವ್ಯಾ ಮೂರು ತಿಂಗಳ ಗರ್ಭಿಣಿ ಆಗಿದ್ದು ನನಗೆ ಜೀವ ಬೆದರಿಕೆ ಇದೆ ಹೀಗಾಗಿ ನನಗೆ ನನ್ನ ಮಗುವಿಗೆ ಏನೇ ಆದರೂ ಅದಕ್ಕೆ ಅರ್ನವ್‌ ಕಾರಣ ಎಂದಿದ್ದಾರೆ.

Ad Widget . Ad Widget .

2014ರಲ್ಲಿ ಶಕ್ತಿ ಧಾರಾವಾಹಿ ಮೂಲಕ ಬಣ್ಣ ಜರ್ನಿ ಆರಂಭಿಸಿದ ಅಮ್ಜದ್ ​ಖಾನ್ ಮೊಹಮ್ಮದ್ ಅತಿ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಸಮಯದಲ್ಲಿ ದಿವ್ಯಾಳ ಜೊತೆ ಪ್ರೀತಿಯಲ್ಲಿ ಬಿದ್ದು ಆಕೆಗೆ ಜಾತಿ ಮತಾಂತರ ಆಗುವಂತೆ ಒತ್ತಾಯ ಮಾಡಿದ್ದಾರೆ. ಪೋಷಕರಿಗೆ ಪ್ರೀತಿ ವಿಚಾರ ತಿಳಿಸಬೇಕು ಅವರಿಂದ ಮದುವೆ ಅನುಮತಿ ಪಡೆಯಬೇಕು ಎಂದು 2022ರ ಫೆಬ್ರವರಿಯಲ್ಲಿ ದಿವ್ಯಾ ಮುಸ್ಲಿಂಗೆ ಮತಾಂತರ ಆಗಿದ್ದಾರೆ.

ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಇಸ್ಲಾಂ ಧರ್ಮದ ಪ್ರಕಾರ ದಿವ್ಯಾ ಮತ್ತು ಅಮ್ಜದ್ ​ಖಾನ್ ಮೊಹಮ್ಮದ್ ಮದುವೆಯಾಗಿದ್ದಾರೆ. ಮದುವೆಯಿಂದ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಮದುವೆ ವಿಚಾರವನ್ನು ಸೀಕ್ರೆಟ್ ಆಗಿಟ್ಟಿದ್ದಾರೆ. ಈ ನಡುವೆ ಕಿರುತೆರೆಯ ಮತ್ತೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದಿವ್ಯಾ ಸತ್ಯ ಬಿಚ್ಚಿಟ್ಟಿದ್ದಾರೆ.

ನಾನು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅಮ್ಜದ್ ​ಖಾನ್ ಮೊಹಮ್ಮದ್ ನನ್ನನ್ನು ಬಿಟ್ಟು ದೂರ ಹೋಗುತ್ತಿದ್ದಾರೆ. ಆಗಲೇ ಬಿಟ್ಟಿದ್ದಾರೆ.ಅಮ್ಜದ್ ​ಖಾನ್ ಮೊಹಮ್ಮದ್‌ಗೆ ಕಿರುತೆರೆ ನಟಿ ಹನ್ಸಿಕಾ ಜೊತೆ ಸಂಬಂಧವಿದೆ. ಆಕೆ ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವಳು’ ಎಂದು ಪೊಲೀಸರ ಬಳಿ ದಿವ್ಯಾ ದೂರು ನೀಡಿದ್ದಾಳೆ. ವಕೀಲರ ಮೂಲಕ ಪತ್ರದಲ್ಲಿ ಮಗು ಮತ್ತು ನನಗೆ ಏನೇ ಆದರೂ ಅದಕ್ಕೆ ಅಮ್ಜದ್ ​ಖಾನ್ ಮೊಹಮ್ಮದ್ ಕಾರಣ ಎಂದು ತಿಳಿಸಿದ್ದಾರೆ. ವೈದ್ಯರ ಜೊತೆ ಗರ್ಭಪಾತ ಮಾಡಿಸಲು ಅಮ್ಜದ್ ​ಖಾನ್ ಮೊಹಮ್ಮದ್ ನಡೆಸಿರುವ ಮಾತುಕಥೆ ಈ ಕೇಸ್‌ಗೆ ಸಿಕ್ಕಿರುವ ಮೊದಲ ಸಾಕ್ಷಿ ಎನ್ನಲಾಗಿದೆ.

Leave a Comment

Your email address will not be published. Required fields are marked *