Ad Widget .

ಆಯುಧ ಪೂಜೆಯಂದು ಮಾರಕಾಸ್ತ್ರಗಳಿಗೆ ಭಜರಂಗದಳದಿಂದ ಪೂಜೆ| ಜಾಲತಾಣಗಳಲ್ಲಿ ಫೋಟೋ ವೈರಲ್

ಸಮಗ್ರ ನ್ಯೂಸ್: ಆಯುಧ ಪೂಜೆಯಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮಾರಕಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದು, ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Ad Widget . Ad Widget .

ತುಮಕೂರಿನ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಈ ಪೂಜೆ ನಡೆದಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

Ad Widget . Ad Widget .

ಪೂಜೆಯಲ್ಲಿ ಲಾಂಗ್, ಕತ್ತಿ, ಏರ್ ಗನ್ ಮೊದಲಾದವುಗಳನ್ನು ಇರಿಸಿ ಪೂಜೆ ಸಲ್ಲಿಸಲಾಗಿದ್ದು, ಇವುಗಳನ್ನು ಯಾರು ಬಳಸುತ್ತಿದ್ದರು ? ವಿಡಿಯೋ ನೋಡಿಯೂ ಪೊಲೀಸರು ಸುಮ್ಮನಿರುವುದು ಏಕೆ ಎಂಬ ಪ್ರಶ್ನೆಗಳನ್ನು ಕೆಲ ನೆಟ್ಟಿಗರು ಕೇಳಿದ್ದಾರೆ.

ಈ ಹಿಂದೆ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವರು ಲಾಂಗ್ ನಿಂದ ಕೇಕ್ ಕತ್ತರಿಸಿದ ವೇಳೆ ಪ್ರಕರಣ ದಾಖಲಿಸಿದ ಉದಾಹರಣೆಗಳಿದ್ದು, ಆದರೆ ಈಗ ಸುಮ್ಮನಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *