Ad Widget .

ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ| ಹಲವು ಭಕ್ತರು‌ ನಾಪತ್ತೆ

ಸಮಗ್ರ ನ್ಯೂಸ್: ದುರ್ಗಾ ವಿಸರ್ಜನೆ ವೇಳೆ ದಿಢೀರ್ ಸೃಷ್ಟಿಯಾದ ಪ್ರವಾಹದಿಂದ ಹಲವು ಭಕ್ತರು ಕೊಚ್ಚಿ ಹೋದ ಘಟನೆ ಪ.ಬಂಗಾಳದಲ್ಲಿ ನಡೆದಿದೆ. ಇಲ್ಲಿನ ಜಲ್‌ಪೈಗುರಿ ಜಿಲ್ಲೆಯ ನಿಯೋರಾ ನದಿ ದಂಡೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದ್ದು ಹಲವರು ನಾಪತ್ತೆಯಾಗಿದ್ದಾರೆ.

Ad Widget . Ad Widget .

ಕಳೆದೆರಡು ದಿನದಿಂದ ಸತತ ಮಳೆಯಾಗುತ್ತಿದ್ದ ಕಾರಣ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 7 ಮಂದಿ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. 60ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ರಕ್ಷಿಸಿದ ಭಕ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget . Ad Widget .

ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಅತೀ ದೊಡ್ಡ ಹಬ್ಬವಾಗಿದೆ. ದುರ್ಗಾ ಮೂರ್ತಿ ಆರಾಧಿಸಿ ವಿಸರ್ಜನೆ ಮಾಡುವುದು ಸಂಪ್ರದಾಯ. ಹೀಗೆ ಮಾಲ್‌ಬಜಾರ್‌ನಲ್ಲಿನ ದುರ್ಗಾ ಪೂಜೆಗೆ ಇಡೀ ಗ್ರಾಮವೇ ಸೇರಿತ್ತು. ದುರ್ಗಾ ಮೂರ್ತಿ ವಿಸರ್ಜನೆ ಮಾಡುವ ವೇಳೆ ಹಲವು ಭಕ್ತರು ನದಿ ದಂಡೆಯಲ್ಲಿ ನಿಂತಿದ್ದರು. ಈ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಮಕ್ಕಳು, ಮಹಿಳೆಯರು, ವೃದ್ಧರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ.

Leave a Comment

Your email address will not be published. Required fields are marked *