Ad Widget .

ಸುಳ್ಯ: ಕಾರು-ಸ್ಕೂಟಿ ಅಪಘಾತ| ಅಣ್ಣ ಸ್ಥಳದಲ್ಲಿಯೇ ಸಾವು; ತಂಗಿ ಆಸ್ಪತ್ರೆಯಲ್ಲಿ ಕೊನೆಯುಸಿರು

ಸಮಗ್ರ ನ್ಯೂಸ್: ಮಾರುತಿ ಕಾರು ಮತ್ತು ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಅಣ್ಣ ಮೃತಪಟ್ಟು ತಂಗಿ ಗಂಭೀರ ಗಾಯಗೊಂಡ ಘಟನೆ‌ ಸುಳ್ಯ ತಾಲೂಕಿನ ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಎಲಿಮಲೆ ಸಮೀಪದ ‌ಜಬಳೆಯಲ್ಲಿ ನಡೆದಿದೆ.

Ad Widget . Ad Widget .

ಮೃತಪಟ್ಟ ಯುವಕ ನಿಶಾಂತ್ ಬಾಜಿನಡ್ಕ ಎಂದು ತಿಳಿದು ಬಂದಿದೆ. ನಿಶಾಂತ್ ತಂಗಿಯನ್ನು ಕರೆದುಕೊಂಡು ಎಲಿಮಲೆಯಿಂದ ಮನೆಗೆ ಹೋಗುತ್ತಿದ್ದಾಗ ಸುಳ್ಯ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

Ad Widget . Ad Widget .

ಕಾರು ಗುದ್ದಿದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಾಲಕ ಸ್ಥಳದಲ್ಲಿಯೇ ಮೃತಪಟ್ಟರೆ , ತೀವ್ರ ಗಾಯಗೊಂಡ ನಿಶಾಂತ್ ನ ತಂಗಿ ಮೋಕ್ಷಳನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮೋಕ್ಷಾ ಕೂಡಾ ಗಂಭೀರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.

ಜಬಳೆ ಸಮೀಪದ ಬಾಜಿನಡ್ಕ ದೇವಿದಾಸ್ ಎಂಬವರ ಮಕ್ಕಳಾದ ನಿಶಾಂತ್ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು ಮೋಕ್ಷ 5 ನೇ ತರಗತಿ ವಿದ್ಯಾರ್ಥಿನಿ. ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

Leave a Comment

Your email address will not be published. Required fields are marked *